- Advertisement -


- Advertisement -
ಬೆಳ್ತಂಗಡಿ: ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಕೆಲಸ ಮಾಡುತ್ತಿದ್ದ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ನಿವಾಸಿ ಅವಿವಾಹಿತ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ(43) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.11 ರಂದು ರಾತ್ರಿ ಸುಮಾರು 9:30 ರ ಸಮಯಕ್ಕೆ ನಡೆದಿದೆ.
ಪಿಗ್ಮಿ ಸಂಗ್ರಹಕಾರ ಕೆಲಸಕ್ಕೆ ರಜೆ ಹಾಕಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತಮ್ಮ ಸಂಬಂಧಿಕರು ಮತ್ತು ಸಹೋದರರೊಂದಿಗೆ ಉತ್ಸಾಹದಿಂದ ಇದ್ದವರು ನ.11 ರಂದು ರಾತ್ರಿ ತಮ್ಮ ಮನೆಯ ಸಮೀಪದ ತೋಟದಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.ಮೃತರು ತಂದೆ ಸೇಸಪ್ಪ ಗೌಡ, ತಾಯಿ ವನಜಾ, ಸಹೋದರ ಶೇಖರ್, ಸಹೋದರಿ ದಿವ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
- Advertisement -


