- Advertisement -
- Advertisement -
ಮೈಸೂರು: ಮಾನಸಿಕ ಖಿನ್ನತೆಗೆ ಒಳಗಾದ ತಾಯಿ ತನ್ನ 8 ತಿಂಗಳ ಮಗು ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನ ದಾಸನೂರು ಗ್ರಾಮದಲ್ಲಿ ನಡೆದಿದೆ.
ಸಿಂಧು (24) ಹಾಗೂ 8 ತಿಂಗಳ ಮಗು ಮುದ್ದು ಮೃತ ದುರ್ದೈವಿಗಳು.
ಚಾಮರಾಜನಗರ ಜಿಲ್ಲೆಯ ಸಿಂಧುಗೆ ದಾಸನೂರಿನ ಮಹದೇವಸ್ವಾಮಿ ಜೊತೆ 9 ವರ್ಷಗಳ ವಿವಾಹವಾಗಿತ್ತು. ನಾಲ್ಕಾರು ಭಾರಿ ಗರ್ಭಪಾತವಾಗಿದ್ದು, ಕಳೆದ ವರ್ಷ ಗಂಡು ಮಗುವಿಗೆ ಜನ್ಮನೀಡಿದ್ದಸಿಂಧು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ನಿನ್ನೆ ರಾತ್ರಿ ಮನೆಯಲ್ಲಿಯಾರು ಇಲ್ಲದ ವೇಳೆ ಮಗು ಸಮೇತ ಬೆಂಕಿ ಹಚ್ಚಿಕೊಂಡಿದ್ದಾಳೆ.
ಕೂಡಲೇ ತಾಯಿ ಮಗುವನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮಗು ಇಬ್ಬರೂ ಮೃತಪಟ್ಟಿದ್ದಾರೆ.
ಈ ಕುರಿತು ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
- Advertisement -