ಬೆಂಗಳೂರು: ಬಿಜೆಪಿ ಮುಖಂಡ ಅನಂತ್ ರಾಜು ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳುತ್ತಿದೆ…ಅನಂತ್ ರಾಜು ಪತ್ನಿ ಸುಮಾ ಹಾಗೂ ರೇಖಾ ಆಡಿಯೋ ವೈರಲ್ ಬಳಿಕ ಇದೀಗ ಈ ಕೇಸ್ ಗೆ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ…
ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಅನಂತ್ ರಾಜು ಸ್ನೇಹಿತೆ ರೇಖಾ, ಸುಮಾ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ… ಅನಂತ್ ರಾಜು ಆತ್ಮಹತ್ಯೆಗೆ ನಾನು ಪ್ರಚೋದನೆ ನೀಡಿಲ್ಲ.ಸುಮಾ ಅವರ ಟಾರ್ಚರ್ ಗೆ ಅನಂತ್ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..ಪ್ರತಿನಿತ್ಯ ನನಗೆ ಕಾಲ್ ಮಾಡಿ ಅನಂತ್ ರಾಜು ಗೆ ಟಾರ್ಚರ್ ನೀಡುತ್ತೇನೆ ಎಂದು ಹೇಳುತ್ತಿದ್ರು…ಎಲ್ಲಾ ಡಿಯೋ ರೆಕಾರ್ಡ್ ಗಳನ್ನು ಪೊಲೀಸರಿಗೆ ನೀಡಿದ್ದೇನೆ..ಪೊಲೀಸರು ಪ್ರಕರಣದ ಬಗ್ಗೆ ಸೂಕ್ತವಾದ ತನಿಖೆ ನಡೆಸಬೇಕು. ನನಗೆ ನ್ಯಾಯವನ್ನು ಒದಗಿಸಬೇಕು…ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಸೂಕ್ತ ತನಿಖೆ ನಡೆಸಬೇಕು ..ನಾನು ಯಾವುದೇ ಹನಿಟ್ಯ್ರಾಪ್ ಮಾಡಿಲ್ಲ ,ಅವರ ಬಳಿ ಯಾವುದೆ ಆಸ್ತಿ ಯನ್ನು ಪಡೆದುಕೊಂಡಿಲ್ಲ ಅಂತಾ ರೇಖಾ ಹೇಳಿದ್ರು..
ಇನ್ನೂ ಅನಂತ್ ರಾಜು ನನಗೆ ಕಳೆದ ಆರು ವರ್ಷದಿಂದ ಪರಿಚಯ..ನನಗೆ ಫೇಸ್ ಬುಕ್ ನಲ್ಲಿ ಅನಂತ್ ರಾಜು ಪರಿಚಯ ಆದ್ರು…ನಂತರ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು..ಅನಂತ್ ರಾಜು ನಡುವೆ ಕಳೆದ ಆರು ವರ್ಷಗಳಿಂದ ಲಿವಿಂಗ್ ರಿಲೇಶನ್ ಶಿಪ್ ಇತ್ತು…ಅವರ ಜೊತೆ ಉತ್ತಮವಾದ ಸಂಬಂಧ ಇತ್ತು..ಆದರೆ ನಾನು ಹನಿಟ್ಯ್ರಾಪ್ ಮಾಡಿಲ್ಲ…ಅವರಿಂದ ಯಾವುದೇ ಹಣ ಪಡೆದಿಲ್ಲ..ಹನಿಟ್ಯ್ರಾಪ್ ಮಾಡೋ ಉದ್ದೇಶ ಇದ್ದಿದ್ರೆ ಆರು ವರ್ಷದ ತನಕ ಕಾಯೋ ಅವಶ್ಯಕತೆ ಇಲ್ಲ…ನಾನು ತಪ್ಪು ಮಾಡಿದ್ದು ನಿಜ. ಆದರೆ ಹನಿಟ್ಯ್ರಾಪ್ ಮಾಡಿಲ್ಲ…ನನಗೆ ನ್ಯಾಯಬೇಕು ಎಂದು ರೇಖಾ ಹೇಳಿದ್ದಾರೆ.
.


