Monday, June 8, 2026
Homeಅಪರಾಧತಾಯಿ ಹಾಗೂ ಮಗು ನಾಪತ್ತೆ- ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!

ತಾಯಿ ಹಾಗೂ ಮಗು ನಾಪತ್ತೆ- ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!

- Advertisement -
- Advertisement -

ಬ್ರಹ್ಮಾವರ: ಪತ್ನಿ ಹಾಗೂ ಮಗ ನಾಪತ್ತೆಯಾಗಿರುವ ಬಗ್ಗೆ ಪತಿ ಮಾರುತಿ ಆರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ನಾಪತ್ತೆಯಾದವರನ್ನು ಆಶಾ ಆರ್ (30) , ಮಗ ಮನೀಶಾ (6) ನಾಪತ್ತೆಯಾದವರು.

ಸುಮಾರು 6 ತಿಂಗಳಿನಿಂದ ಬ್ರಹ್ಮಾವರ ತಾಲೂಕು,ಹಾರಾಡಿ ಗ್ರಾಮದ ವೆಂಕಪ್ಪ ಅಮೀನ್ ಕಂಪೌಂಡ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದು, ಪತಿ ತರಕಾರಿ ವ್ಯಾಪಾರದ ನಿಮಿತ್ತ ಮನೆಯಿಂದ ಹೋಗಿ ವಾಪಾಸ್ಸು ಹಿಂದಿರುಗಿದಾಗ ಮನೆಯಲ್ಲಿ ಹೆಂಡಿತಿ ಮತ್ತು ಮಗ ಮನೆಯಲ್ಲಿ ಇಲ್ಲದೇ ಕಾಣೆಯಾಗಿದ್ದಾರೆ.

ಇನ್ನು ಕಾಣೆಯಾದ ಬಗ್ಗೆ ಮಾರುತಿ ಅವರು ಅಕ್ಕ ಪಕ್ಕ ಹುಡುಕಾಡಿದ್ದು ಅಲ್ಲದೇ ಊರಿಗೆ ಹೋಗಿರಬಹುದೆಂದು ಅಲ್ಲಿಗೆ ಹೋಗಿ ಆಕೆಯ ಮನೆಯಲ್ಲಿ, ಸಂಬಂಧಿಕರ ಮನೆಗಳಲ್ಲಿ ಹುಡುಕಿಕೊಂಡು ಹೋಗಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 208/2021 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!