Tuesday, October 20, 2026
Homeಕರಾವಳಿಮಂಗಳೂರು ದಸರಾ ಮೆರವಣಿಗೆ ಪ್ರಯುಕ್ತ ಅ.21ರಂದು ಸಂಚಾರ ಮಾರ್ಗ ಬದಲಾವಣೆ; ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ

ಮಂಗಳೂರು ದಸರಾ ಮೆರವಣಿಗೆ ಪ್ರಯುಕ್ತ ಅ.21ರಂದು ಸಂಚಾರ ಮಾರ್ಗ ಬದಲಾವಣೆ; ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ

- Advertisement -
- Advertisement -

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದಸರಾ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ವಾಹನ ಸಂಚಾರದಲ್ಲಿ ಬದಲಾವಣೆ ಹಾಗೂ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆಯನ್ನು ಪ್ರಕಟಿಸಿದ್ದಾರೆ.

ಅಕ್ಟೋಬರ್ 21ರ ಬುಧವಾರ ಸಂಜೆ 4 ಗಂಟೆಯಿಂದ ಅಕ್ಟೋಬರ್ 22ರ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾವಣೆ ಜಾರಿಯಲ್ಲಿರಲಿದೆ. ಮೆರವಣಿಗೆ ಸಾಗುವ ರಸ್ತೆಯಲ್ಲಿ ಅಕ್ಟೋಬರ್ 21ರ ಮಧ್ಯಾಹ್ನ 2 ಗಂಟೆಯಿಂದಲೇ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಶೋಭಾಯಾತ್ರೆಯು ಕುದ್ರೋಳಿ ದೇವಸ್ಥಾನದಿಂದ ಆರಂಭವಾಗಿ ಮಣ್ಣಗುಡ್ಡೆ ಜಂಕ್ಷನ್, ಲೇಡಿಹಿಲ್, ಲಾಲ್‌ಭಾಗ್, ಬಳ್ಳಾಲ್‌ಭಾಗ್, ಪಿವಿಎಸ್ ಜಂಕ್ಷನ್, ನವಭಾರತ ವೃತ್ತ, ಸಿಟಿ ಸೆಂಟರ್, ಹಂಪನಕಟ್ಟೆ, ಕಾರ್ ಸ್ಟ್ರೀಟ್ ಹಾಗೂ ನ್ಯೂ ಚಿತ್ರಾ ಜಂಕ್ಷನ್ ಮೂಲಕ ಮತ್ತೆ ದೇವಸ್ಥಾನಕ್ಕೆ ತಲುಪಲಿದೆ.

ಪರ್ಯಾಯ ಮಾರ್ಗಗಳ ವಿವರ

  • ಕೊಟ್ಟಾರ ಚೌಕಿಯಿಂದ ಲೇಡಿಹಿಲ್ ಮೂಲಕ ನಗರಕ್ಕೆ ಬರುವ ವಾಹನಗಳು ಕುಂಟಿಕಾನ–ಕೆಪಿಟಿ–ನಂತೂರು ಮಾರ್ಗವಾಗಿ ಸಂಚರಿಸಬೇಕು.
  • ಬಂಟ್ಸ್ ಹಾಸ್ಟೆಲ್‌ನಿಂದ ಪಿವಿಎಸ್ ಮೂಲಕ ಎಂ.ಜಿ. ರಸ್ತೆಗೆ ತೆರಳುವ ವಾಹನಗಳು ಭಾರತ್ ಬೀಡಿ–ಬಟ್ಟಗುಡ್ಡ–ಕೆಪಿಟಿ ಅಥವಾ ಮಲ್ಲಿಕಟ್ಟೆ ಮಾರ್ಗ ಬಳಸಬೇಕು.
  • ಕೆಎಸ್‌ಆರ್‌ಟಿಸಿ ಜಂಕ್ಷನ್‌ನಿಂದ ಲಾಲ್‌ಭಾಗ್ ಕಡೆಗೆ ತೆರಳುವ ವಾಹನಗಳು ಕಾಪಿಕಾಡ್–ಕುಂಟಿಕಾನ ಅಥವಾ ಬಿಜೈ–ಬಟ್ಟಗುಡ್ಡ ಮಾರ್ಗದಲ್ಲಿ ಸಂಚರಿಸಬೇಕು.
  • ಹಂಪನಕಟ್ಟೆಯಿಂದ ಕೆಎಸ್‌ಆರ್ ರಸ್ತೆ ಹಾಗೂ ನವಭಾರತ ವೃತ್ತದ ಮೂಲಕ ಪಿವಿಎಸ್ ಕಡೆಗೆ ತೆರಳುವ ವಾಹನಗಳು ಎಲ್‌ಎಚ್‌ಎಚ್–ಅಂಬೇಡ್ಕರ್ ಜಂಕ್ಷನ್ ಮಾರ್ಗ ಬಳಸಬೇಕು.
  • ನ್ಯೂ ಚಿತ್ರಾ ಜಂಕ್ಷನ್‌ನಿಂದ ನವಭಾರತ ವೃತ್ತದ ಕಡೆಗೆ ಹಾಗೂ ಲೇಡಿಹಿಲ್‌ನಿಂದ ಮಣ್ಣಗುಡ್ಡೆ ಮೂಲಕ ಕುದ್ರೋಳಿ ದೇವಸ್ಥಾನಕ್ಕೆ ತೆರಳುವ ವಾಹನಗಳು ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕು.

ಪಾರ್ಕಿಂಗ್ ವ್ಯವಸ್ಥೆ

ಮೆರವಣಿಗೆ ವೀಕ್ಷಿಸಲು ಬರುವ ಸಾರ್ವಜನಿಕರು ಕರಾವಳಿ ಮೈದಾನ, ಅಳಕೆ ಮಾರ್ಕೆಟ್, ಉರ್ವ ಮಾರ್ಕೆಟ್ ಮೈದಾನ, ಉರ್ವ ಕೆನರಾ ಸ್ಕೂಲ್, ಕೆನರಾ ಡೊಂಗರಕೇರಿ ಸ್ಕೂಲ್, ಪೊಂಪೈ ಚರ್ಚ್, ದುರ್ಗಾಮಹಲ್ ಹೋಟೆಲ್, ಕುದ್ರೋಳಿ ನಾರಾಯಣ ಕಾಲೇಜು, ಬಿಇಎಂ ಸ್ಕೂಲ್, ಕಾರ್ ಸ್ಟ್ರೀಟ್ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ ಹಾಗೂ ಹೋಟೆಲ್ ವಿಮಲೇಶ್ ಬಳಿ ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದು.

ಮೆರವಣಿಗೆ ಸಾಗುವ ರಸ್ತೆ ಬದಿಗಳಲ್ಲಿ ವಾಹನ ನಿಲುಗಡೆ ಮಾಡದಂತೆ ಮತ್ತು ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಇಲಾಖೆ ಮನವಿ ಮಾಡಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ ಸುರಕ್ಷಿತವಾಗಿ ದಸರಾ ಸಂಭ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದೆ.

- Advertisement -

Latest News

error: Content is protected !!