Tuesday, October 20, 2026
Homeಕರಾವಳಿಸೌತಡ್ಕ ಮಹಿಳೆಯ ಮೇಲಿನ ದೌರ್ಜನ್ಯ ಖಂಡಿಸಿ ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಭೇಟಿ ಹಾಗೂ ಬೆಂಬಲ

ಸೌತಡ್ಕ ಮಹಿಳೆಯ ಮೇಲಿನ ದೌರ್ಜನ್ಯ ಖಂಡಿಸಿ ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಭೇಟಿ ಹಾಗೂ ಬೆಂಬಲ

- Advertisement -
- Advertisement -

ಬೆಳ್ತಂಗಡಿ: ಕೊಕ್ಕಡ ಗ್ರಾಮದ ಸೌತಡ್ಕದಲ್ಲಿ ಅಂಗಡಿ ಕೋಣೆಗಳ ವಿವಾದಕ್ಕೆ ಸಂಬಂಧಿಸಿದಂತೆ, ನಿಡ್ಲೆ ಗ್ರಾಮದ ಬೂಡುಜಾಲು ಸೂರ್ಲ ಮನೆಯ ನಿಶ್ಮಿತಾ ಎಂಬವರ ಮೇಲೆ ರಾಘವ ಭಂಡಾರಿ ಎಂಬಾತ ದೌರ್ಜನ್ಯವೆಸಗಿದ್ದಾನೆ.

ಸದ್ಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿಶ್ಮಿತಾ ಅವರನ್ನು ಅ.20 ರಂದು ಯುವವಾಹಿನಿ ಬೆಳ್ತಂಗಡಿ ಘಟಕದ ಪದಾಧಿಕಾರಿಗಳು ಭೇಟಿಯಾಗಿ, ಅವರಿಗಾದ ಅನ್ಯಾಯವನ್ನು ವಿಚಾರಿಸಿ, ಅವರ ನ್ಯಾಯಪರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಗೌರವ ಸಲಹೆಗಾರರಾದ ರಮಾನಂದ ಸಾಲಿಯಾನ್ ಮುಂಡೂರು, ಯುವವಾಹಿನಿ ಕೇಂದ್ರ ಸಮಿತಿಯ ಆರೋಗ್ಯ ನಿರ್ದೇಶಕರು ಹಾಗೂ ಘಟಕದ ಸ್ಥಾಪಕ ಅಧ್ಯಕ್ಷರಾದ ರಾಕೇಶ್ ಮುಡುಕೋಡಿ, ಬೆಳ್ತಂಗಡಿ ಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘದ ನಿರ್ದೇಶಕರಾದ ಗುರುರಾಜ್ ಗುರಿಪಳ್ಳ ಹಾಗೂ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಬಳಂಜ ಉಪಸ್ಥಿತರಿದ್ದರು.

- Advertisement -

Latest News

error: Content is protected !!