Saturday, June 6, 2026
HomeUncategorizedಉಪ್ಪಿನಂಗಡಿಯಲ್ಲಿ ಮಗ ಸಾವನ್ನಪ್ಪಿದ ಎರಡು ದಿನದ ಬಳಿಕ ತಾಯಿಯೂ ನಿಧನ

ಉಪ್ಪಿನಂಗಡಿಯಲ್ಲಿ ಮಗ ಸಾವನ್ನಪ್ಪಿದ ಎರಡು ದಿನದ ಬಳಿಕ ತಾಯಿಯೂ ನಿಧನ

- Advertisement -
- Advertisement -

ಉಪ್ಪಿನಂಗಡಿ; ಮಗ ಸಾವನ್ನಪ್ಪಿದ ಮರುದಿನ ತಾಯಿಯೂ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ ಸಮೀಪದ  ಹಿರೆಬಂಡಾಡಿ ಗ್ರಾಮದ ಸರೋಳಿಯಲ್ಲಿ ನಡೆದಿದೆ.

ಹಿರೆಬಂಡಾಡಿ ಗ್ರಾ.ಪಂ.ಮಾಜಿ ಸದಸ್ಯ, ಬಿಜೆಪಿ ಕಾರ್ಯಕರ್ತ ಯಶವಂತ ಸರೋಳಿ(59ವ.)ರವರು ಸೆ.6ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಬಳಿಕ  ಯಶವಂತ ಸರೋಳಿಯವರ ತಾಯಿ ರುಕ್ಮಿಣಿ(72ವ.)ರವರು ಅಸ್ವಸ್ಥಗೊಂಡು ಕಳೆದ 1 ವಾರದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಸೆ.8ರಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ತಾಯಿ ಹಾಗೂ ಮಗನ ಸಾವು ಇವರ ಕುಟುಂಬಕ್ಕೆ ಅಘಾತ ನೀಡಿದ್ದು  ಮೃತ ರುಕ್ಮಿಣಿಯವರು ಪತಿ ಕುಕ್ಕಪ್ಪ ಗೌಡ, ಪುತ್ರರಾದ ಮೋನಪ್ಪ ಸರೋಳಿ, ಜನಾರ್ದನ ಸರೋಳಿ, ನೀಲಯ್ಯ ಸರೋಳಿ, ಪುತ್ರಿಯರಾದ ಭವಾನಿ, ಮೀನಾಕ್ಷಿಯವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!