Tuesday, June 23, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಮೋಸ್ಟ್ ವಾಂಟೆಡ್ ನಕ್ಸಲ್ ಜಯಣ್ಣ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

ಬೆಳ್ತಂಗಡಿ: ಮೋಸ್ಟ್ ವಾಂಟೆಡ್ ನಕ್ಸಲ್ ಜಯಣ್ಣ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

- Advertisement -
- Advertisement -

ಕೇರಳ ರಾಜ್ಯದ ತ್ರಿಶೂರ್ ಜೈಲಿನಿಂದ ಬಂಧಿತ ನಕ್ಸಲ್ ಮಹೇಶ್@ಜಯಣ್ಣ@ಜಾನ್ ಅವರನ್ನು ಕೇರಳ ರಾಜ್ಯದ ಪೊಲೀಸರು ಬಿಗಿ ಭದ್ರತೆಯೊಂದಿಗೆ ಫೆ. 19 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ  ಹಾಜರು ಪಡಿಸಿದರು.

ಮೊಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ ಮಹೇಶ್ ಮೂಲತಃ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮ ಕುಡುಡಿ ಮುಖ್ಯ ರಸ್ತೆಯ ಹನುವ್ವನ ದೂತರ ಮಠದ ಎದುರಿನ ಅಂಬೇಡ್ಕ‌ರ್ ಕಾಲೋನಿಯ ನಿವಾಸಿ. ಇವರಿಗೆ ಮಹೇಶ್ ಆಲಿಯಾಸ್ ಜಯಣ್ಣ ಆಲಿಯಾಸ್ ಜಾನ್ ಆಲಿಯಾಸ್ ಮಾರಪ್ಪ ಎಂಬ ಹೆಸರುಗಳಿವೆ.

ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012 ರಲ್ಲಿ ಕುತ್ಲೂರು ಲಿಂಗಪ್ಪ ಮಲೆಕುಡಿಯ ಮನೆಯ ಅಂಗಳದಲ್ಲಿ ನಕ್ಸಲ್ ಕರಪತ್ರ ಹಚ್ಚಿದ್ದ ಪ್ರಕರಣವನ್ನು ಮರು ತನಿಖೆಗೆ ಆದೇಶ ಹೊರಡಿಸಿದ ಕಾರಣ ಅವರನ್ನು ಬೆಳ್ತಂಗಡಿ ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ. ಕಳೆದ ಆರು ತಿಂಗಳಿಂದ ಕೇರಳದ ಜೈಲಿನಲ್ಲಿದ್ದಾರೆ . ಕರ್ನಾಟಕದ ನಕ್ಸಲ್ ಮುಖಂಡರುಗಳೊಂದಿಗೆ ಮಹೇಶ್ ಅವರೂ ರಾಜ್ಯದ  ಸಿಎಂ ಮುಂದೆ ಶರಣಾಗತಿಯಾಗಿದ್ದರು.

ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012 ರಲ್ಲಿ ಕುತ್ಲೂರು ರಾಮಚಂದ್ರ ಭಟ್ ಅವರ ಮನೆಯ ಅಂಗಳದಲ್ಲಿದ್ದ ಕಾರು ಹಾಗೂ ಬೈಕ್ ಗೆ ಬೆಂಕಿ ಹಚ್ಚಿರುವ ಪ್ರಕರಣವನ್ನು ಮರು ತನಿಖೆಗೆ ಆದೇಶ ಹೊರಡಿಸಿದ ಕಾರಣ ಅವರನ್ನು ಬೆಳ್ತಂಗಡಿ ನ್ಯಾಯಲಕ್ಕೆ ಹಾಜರು ಪಡಿಸಲಾಗಿದೆ. ಕಳೆದ ಆರು ತಿಂಗಳಿಂದ ಕೇರಳದ ಜೈಲಿನಲ್ಲಿದ್ದಾರೆ. ಕರ್ನಾಟಕದ ನಕ್ಸಲ್ ಮುಖಂಡರುಗಳೊಂದಿಗೆ ಮಹೇಶ್ ಅವರೂ ರಾಜ್ಯದ ಸಿಎಂ ಮುಂದೆ ಶರಣಾಗತಿಯಾಗಿದ್ದರು.

- Advertisement -

Latest News

error: Content is protected !!