Friday, June 27, 2025
Homeಕರಾವಳಿಉಡುಪಿಮಂಗಳೂರು: ಮೋಸ್ಟ್ ವಾಟೆಂಡೆಡ್ ಆರೋಪಿ ಯನ್ನು ಬಂಧಿಸಿ ಪೊಲೀಸರು ಹಲ್ಲೆ ನಡೆಸಿದ ಆರೋಪ: ತೀವ್ರ ನಿಗಾ...

ಮಂಗಳೂರು: ಮೋಸ್ಟ್ ವಾಟೆಂಡೆಡ್ ಆರೋಪಿ ಯನ್ನು ಬಂಧಿಸಿ ಪೊಲೀಸರು ಹಲ್ಲೆ ನಡೆಸಿದ ಆರೋಪ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ

spot_img
- Advertisement -
- Advertisement -

ಮಂಗಳೂರು: ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದ  ಆರೋಪಿ ಮೂಡಬಿದಿರೆಯ ತೋಡಾರಿನ ಮುಹಮ್ಮದ್ ಫೈಝಲ್ (33) ಎಂಬಾತನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಫೈಝಲ್ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರಿಂದ ಆತನ ಕಿಡ್ನಿಗೆ ಹಾನಿಯಾಗಿ ಆರೋಗ್ಯ ಹದಗೆಟ್ಟಿದೆ ಎಂದು ಫೈಝಲ್ ಕುಟುಂಬಸ್ಥರು ಆರೋಪಿಸಿದ್ದಾರೆ. ಫೈಝಲ್ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಫೈಝಲ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕೋರ್ಟ್ ವಾರಂಟ್ ಹಿನ್ನೆಲೆಯಲ್ಲಿ ಇದೇ ತಿಂಗಳ 12 ರ ಮೂಡಬಿದಿರೆ ಪೊಲೀಸರು ಮನೆಗೆ ದಾಳಿ ಮಾಡಿ ಮನೆಯಿಂದಲೇ ಬಂಧಿಸಿದ್ದರು. ಆಗಸ್ಟ್ 13ರಂದು ಕೋರ್ಟ್ ಗೆ ಹಾಜರುಪಡಿಸಿದ್ದರು. ಬಳಿಕ ಜೈಲು ಸೇರಿದ್ದ ಫೈಝಲ್, ಆಗಸ್ಟ್  14 ಮತ್ತು 15ರಂದು ಜೈಲಿನಲ್ಲಿ ಸತತವಾಗಿ ವಾಂತಿ ಮಾಡಿದ್ದರಿಂದ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆತಂದು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಫೈಝಲ್ ಕುಟುಂಬಸ್ಥರು ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ, ಪೊಲೀಸರು ತನ್ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವುದಾಗಿ ಫೈಝಲ್ ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

 ಆಗಸ್ಟ್ 12ರಂದು ಮನೆಯಿಂದ ಬಂಧಿಸಿ ಕರೆದುಕೊಂಡು ಹೋಗಿದ್ದ ಪೊಲೀಸರು ಗೌಪ್ಯ ಸ್ಥಳದಲ್ಲಿ ಹಲ್ಲೆ ನಡೆಸಿ, ರಾಡ್ ನಿಂದ ಹೊಡೆದು, ಬೂಟುಗಾಲಿನಲ್ಲಿ ಒದ್ದಿದ್ದಾರೆ ಎಂದು ಫೈಝಲ್ ತಿಳಿಸಿರುವುದಾಗಿ ಕುಟುಂಬಸ್ಥರು ಮಾಹಿ

- Advertisement -
spot_img

Latest News

error: Content is protected !!