Wednesday, June 3, 2026
Homeಕರಾವಳಿಪುತ್ತೂರು;ಅಪ್ರಾಪ್ತೆಗೆ ಕಿರುಕುಳ ನೀಡಿದ ಹಲವು ಪ್ರಕರಣದ ಆರೋಪಿಯ ಬಂಧನ

ಪುತ್ತೂರು;ಅಪ್ರಾಪ್ತೆಗೆ ಕಿರುಕುಳ ನೀಡಿದ ಹಲವು ಪ್ರಕರಣದ ಆರೋಪಿಯ ಬಂಧನ

- Advertisement -
- Advertisement -

ಪುತ್ತೂರು;ಅಪ್ರಾಪ್ತೆಗೆ ಕಿರುಕುಳ ನೀಡಿದ ಹಲವು ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿಯ ನಾವೂರು ಗ್ರಾಮದ ಕೀರ್ನಡ್ಕ ನಿವಾಸಿ ಆಜುದ್ದೀನ್ ಯಾನೆ ತಾಜು ಅಲಿಯಾಸ್ ಮಹಮ್ಮದ್ ತಾಜುದ್ದೀನ್ (33) ಬಂಧಿತ ಆರೋಪಿ.

ಪುತ್ತೂರಿನಲ್ಲಿ ಅಪ್ರಾಪ್ತೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.ಮಹಿಳಾ ಪೊಲೀಸ್ ಠಾಣೆಯ ಎಸ್.ಐ ಭವಾನಿ ಮತ್ತು ಸಿಬ್ಬಂದಿಗಳಾದ ಹರೀಶ್, ಸುಜಿನ್ ಮತ್ತು ಕುಮಾರಸ್ವಾಮಿಯವರು ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯ ವಿರುದ್ದ ಕೊಲೆ, ಮಾನಭಂಗ, ಅಕ್ರಮ ಗೋಸಾಗಾಣಿಕೆ ಸೇರಿದಂತೆ ಹಲವು ಪ್ರಕರಣಗಳಿದ್ದು, ಬೆಳ್ತಂಗಡಿ, ಧರ್ಮಸ್ಥಳ, ಮಂಗಳೂರು ಪೊಲೀಸ್ ಠಾಣೆಗಳಲ್ಲಿ ಒಟ್ಟು 19 ಪ್ರಕರಣಗಳಿವೆ ಎನ್ನಲಾಗಿವೆ.ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Latest News

error: Content is protected !!