Tuesday, May 14, 2024
Homeಕರಾವಳಿಪ್ರವಾಸೋದ್ಯಮ ಅಭಿವೃದ್ದಿಗೆ  ಸಿ.ಆರ್ ಜೆಡ್ ನಿಯಮಗಳ ಸಡಿಲಿಕೆ : ಬಂಟ್ವಾಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ಪ್ರವಾಸೋದ್ಯಮ ಅಭಿವೃದ್ದಿಗೆ  ಸಿ.ಆರ್ ಜೆಡ್ ನಿಯಮಗಳ ಸಡಿಲಿಕೆ : ಬಂಟ್ವಾಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

spot_img
- Advertisement -
- Advertisement -

ಮಂಗಳೂರು, ಏಪ್ರಿಲ್ 13: ಸಿಆರ್‍ಜೆಡ್ ನಿಯಮಗಳನ್ನು ಸಡಿಲಗೊಳಿಸಿ ಈ ಭಾಗದ ಪ್ರವಾಸೋದ್ಯ ಅಭಿವೃದ್ಧಿಗೆ ಪಣತೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಂಟ್ವಾಳದಲ್ಲಿ ಇಂದು ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು 330 ಕಿ.ಮೀಗಳಿಗಿಂತಲೂ ಹೆಚ್ಚು ಉದ್ದದ ಕರಾವಳಿ ಹೊಂದಿರುವ ರಾಜ್ಯ ನಮ್ಮದು. ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶಗಳಿವೆ. ಆದರೆ, ಗೋವಾ ಮತ್ತು ಕೇರಳಕ್ಕೆ ಇರುವ ಸಿ.ಆರ್ ಜೆಡ್ ನಿಯಮಗಳು ನಮಗೆ ದೊರಕಿಲ್ಲ. ನಾವು ಅದರ ಹಿಂದೆ ಬಿದ್ದಿದ್ದು, ಇದಾದರೆ ಪ್ರವಾಸೋದ್ಯಮ ಬೆಳೆದು, ಉದ್ಯೋಗ ಸೃಜನೆಯಾಗುತ್ತದೆ. ಬರುವ ದಿನಗಳಲ್ಲಿ ಸಮಗ್ರ ಕರಾವಳಿ ಪ್ರದೇಶದ ಅಭಿವೃದ್ದಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಆರ್ಥಿಕತೆಗೆ ಬಹಳ ದೊಡ್ಡ ಪ್ರಭಾವ ಬೀರಲಿದೆ ಎಂದರು.


ಮಂಗಳೂರು ಮತ್ತು ಕಾರವಾರ ಬಂದರಿನ ವಿಸ್ತರಣೆಗೆ ಈಗಾಗಲೇ ಬಜೆಟ್‍ನಲ್ಲಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರ ಈ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದು ಬರುವ ದಿನಗಳಲ್ಲಿ ಎರಡೂ ಬಂದರಿನ ಸಾಮರ್ಥ್ಯವನ್ನು ಹೆಚ್ಚಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಮೂಲಕ ವ್ಯಾಪಾರ ವಹಿವಾಟನ್ನು ಹೆಚ್ಚು ಮಾಡಬಹುದಾಗಿದೆ ಎಂದರು. ಎಂಟು ಮೀನುಗಾರರ ಬಂದರಿನ ಟ್ರೆಜಿಂಗ್ ನ್ನು ಇದೇ ವರ್ಷ ಕೈಗೊಳ್ಳಲಾಗುವುದು. ಇದೊಂದು ದೊಡ್ಡ ದಾಖಲೆ. ಬಂದರಿನಲ್ಲಿ ತುಂಬಿರುವ ಹೂಳನ್ನು ತೆಗೆದು ಹೆಚ್ಚಿನ ದೋಣಿಗಳಿಗೆ ಮತ್ತು ಮೀನುಗಾರಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.

ಸಾಮಾನ್ಯ ಮೀನುಗಾರನೂ ಕೂಡ ದೊಡ್ಡ ಬೋಟ್‍ಗಳಲ್ಲಿ ಡೀಪ್ ಸೀ ಫಿಶಿಂಗ್ ನ್ನು ಮಾಡಲು ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ 100 ಕೋಟಿ ರೂ.ಗಳನ್ನು ಸಹಾಯಧನ ರೂಪದಲ್ಲಿ ಒದಗಿಸಲಾಗಿದೆ. ಡೀಸಲ್ ಮತ್ತು ಸೀಮೆಎಣ್ಣೆ ಸಹಾಯಧನ ಕುರಿತಂತೆ ಹಲವಾರು ಸಮಸ್ಯೆಗಳನ್ನು ನನ್ನ ಗಮನಕ್ಕೆ ತರಲಾಗಿದೆ. ಮೀನುಗಾರಿಕೆ ಈ ಭಾಗದ ಬಹಳ ದೊಡ್ಡ ವೃತ್ತಿ. ಅದಕ್ಕೆ ಸಹಾಯ ಮಾಡುವುದು ನಮ್ಮ ಸರ್ಕಾರದ ಕರ್ತವ್ಯ ಎಂದರು.

- Advertisement -
spot_img

Latest News

error: Content is protected !!