Monday, April 29, 2024
Homeಜ್ಯೋತಿಷ್ಯನಾಳೆ ಚಂದ್ರಗ್ರಹಣ: ಯಾವ ರಾಶಿಗೆ ಯಾವ ಫಲ.?

ನಾಳೆ ಚಂದ್ರಗ್ರಹಣ: ಯಾವ ರಾಶಿಗೆ ಯಾವ ಫಲ.?

spot_img
- Advertisement -
- Advertisement -

ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಸಮರ್ಥ್ ದೀಕ್ಷಿತ್
ಚೌಡೇಶ್ವರಿ ದೇವಿಯ ಆರಾಧಕರು
+91 95353 12045
ಸ್ತ್ರೀ ಪುರುಷ ವಶೀಕರಣ, ಲಕ್ಷ್ಮೀ ವಶೀಕರಣ ಇನ್ನೀತರ ವಶೀಕರಣಕ್ಕೆ ಸ್ಪೆಷಲಿಸ್ಟ್ ಕೆವಲ 9 ದಿನಗಳಲ್ಲಿ 100ಕ್ಕೆ 100ರಷ್ಟು ಶಾಶ್ವತ ಪರಿಹಾರ. ಪ್ರೀತಿಯಲ್ಲಿ ನಂಬಿ ಮೊಸ ಹೋಗಿದ್ದಿರ? ನೀವು ಇಷ್ಟಪಟ್ಟಿರುವ ಸ್ತ್ರೀ ನಿಮ್ಮಂತೆ ಆಗಲು, ಹಣಕಾಸು ವ್ಯವಹಾರ, ಶತ್ರುಗಳ ಕಾಟ, ಸಾಲದಬಾದೆ, ಸತಿ ಪತಿ ಕಲಹ, ಲೈಂಗಿಕ ಸಮಸ್ಯೆ. ನಿಮ್ಮ ಜೀವನದ ಯಾವುದೇ ಸಮಸ್ಯೆ. ಏನೇ ಇರಲಿ.. ಎಷ್ಟೇ ಕಠಿಣವಾದರೂ ಶಾಶ್ವತ ಪರಿಹಾರ.

ಭಾರತೀಯ ಸಮಯದ ಪ್ರಕಾರ ಜೂನ್ 5ರ ರಾತ್ರಿ 11 ಗಂಟೆ 16 ನಿಮಿಷದಿಂದ ಬೆಳಗಿನ ಜಾವ 2 ಗಂಟೆ 32 ನಿಮಿಷ ಚಂದ್ರಗ್ರಹಣ ಸಂಭವಿಸುತ್ತಿದೆ. . ಕೊರೊನಾ ಸಂಕಷ್ಟದ ಸಮಯದಲ್ಲಿ ಗ್ರಹಣವು ಎಲ್ಲಾ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ..

ಮೇಷ ರಾಶಿ
ಮೇಷ ರಾಶಿಯವರಿಗೆ ಚಂದ್ರ ಗ್ರಹಣದಿಂದಾಗಿ ಮನೆಯಲ್ಲಿ ಗೊಂದಲದ ವಾತಾವರಣವಿರಬಹುದು. ಕುಟುಂಬ ಸದಸ್ಯರ ನಡುವೆ ವಿವಾದ ಏರ್ಪಡಲಿದೆ. ಮಾನಸಿಕ ಒತ್ತಡಕ್ಕೆ ಒಳಗಾಗ್ತಿರಿ. ವಿವಾದಗಳಿಂದ ದೂರವಿರಿ.

ವೃಷಭ ರಾಶಿ
ವೃಷಭ ರಾಶಿಯವರ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆರೋಗ್ಯದ ಬಗ್ಗೆಯೂ ಗಮನ ನೀಡಿ. ಆಹಾರ ಮತ್ತು ಪಾನೀಯಗಳ ಬಗ್ಗೆ ಗಮನ ನೀಡಿ.

ಮಿಥುನ ರಾಶಿ
ಮಿಥುನ ರಾಶಿಯವರ ಆರ್ಥಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ಅನಾವಶ್ಯಕ ವಾದ ಮಾಡಬೇಡಿ.

ಕರ್ಕ ರಾಶಿ
ಕರ್ಕ ರಾಶಿಯವರು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗ್ತಾರೆ. ಪ್ರೀತಿಯ ಜೀವನದಲ್ಲಿ ಗಲಾಟೆಯಾಗಬಹುದು. ಶಿಕ್ಷಣ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವವರು ಸಹ ಜಾಗರೂಕರಾಗಿರಬೇಕು.

ಸಿಂಹ ರಾಶಿ
ಸಿಂಹ ರಾಶಿಯವರು ಕುಟುಂಬದ ಆರೋಗ್ಯವನ್ನು ನೋಡಿಕೊಳ್ಳಿ. ಗ್ರಹಣವು ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪರಿಸ್ಥಿತಿಯನ್ನು ಶಾಂತಗೊಳಿಸಿ ಮತ್ತು ವಿವಾದದಲ್ಲಿ ಸಿಲುಕಬೇಡಿ.

ಕನ್ಯಾ ರಾಶಿ
ಕನ್ಯಾ ರಾಶಿಯವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ವ್ಯವಹಾರದಲ್ಲಿ ಸಹಭಾಗಿತ್ವ ನಷ್ಟಕ್ಕೆ ಕಾರಣವಾಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಕೆಲಸದಲ್ಲಿ ಅಡೆತಡೆಗಳು ಎದುರಾಗುತ್ತವೆ. ಪರಿಸ್ಥಿತಿಗಳು ಇನ್ನೂ ಪ್ರತಿಕೂಲವಾಗಿವೆ. ಆದ್ದರಿಂದ ಶಾಂತವಾಗಿ ಕೆಲಸ ಮಾಡಿ. ಅಧಿಕಾರಿಗಳೊಂದಿಗೆ ಗೊಂದಲಕ್ಕಿಳಿಯಬೇಡಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ಧ್ಯಾನ ಮಾಡಿ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿ.

ಧನು ರಾಶಿ
ಧನು ರಾಶಿಯವರಿಗೆ ಗ್ರಹಣ ಸವಾಲಾಗಿರುತ್ತದೆ. ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. ಸಕಾರಾತ್ಮಕ ಆಲೋಚನೆಗಳನ್ನು ಮಾಡಿ.

ಮಕರ ರಾಶಿ
ಮಕರ ರಾಶಿಯವರು ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಸಂಗಾತಿ ಮಧ್ಯೆ ಜಗಳಕ್ಕೆ ಕಾರಣವಾಗಬಹುದು.

ಕುಂಭ ರಾಶಿ
ಕುಂಭ ರಾಶಿಯವರಿಗೆ ಶತ್ರು ತಂಡವು ಪ್ರಾಬಲ್ಯ ಸಾಧಿಸುತ್ತದೆ. ಕುಟುಂಬ ಸದಸ್ಯರ ಆರೋಗ್ಯವು ಏರುಪೇರಾಗಬಹುದು. ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಡಿ.

ಮೀನ ರಾಶಿ
ಮೀನ ರಾಶಿಯವರು ಪ್ರಯಾಣ ಬೆಳೆಸುವ ವೇಳೆ ಎಚ್ಚರಿಕೆ ವಹಿಸಬೇಕು. ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ. ಅಗತ್ಯವಿಲ್ಲವೆಂದ್ರೆ ಪ್ರವಾಸ ಮುಂದೂಡಿ. ಮನೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

- Advertisement -
spot_img

Latest News

error: Content is protected !!