Wednesday, May 15, 2024
Homeಕರಾವಳಿಉಪ್ಪಿನಂಗಡಿ: ಲಾಕ್ ಡೌನ್ ಮುಗಿಯುತ್ತಿದ್ದಂತೆ ಎದ್ದು ನಿಂತಿದೆ ಅನಧಿಕೃತ ಅಂಗಡಿ ಕಟ್ಟಡ

ಉಪ್ಪಿನಂಗಡಿ: ಲಾಕ್ ಡೌನ್ ಮುಗಿಯುತ್ತಿದ್ದಂತೆ ಎದ್ದು ನಿಂತಿದೆ ಅನಧಿಕೃತ ಅಂಗಡಿ ಕಟ್ಟಡ

spot_img
- Advertisement -
- Advertisement -

ಉಪ್ಪಿನಂಗಡಿ: ಕೊರೋನಾ ಲಾಕ್ ಡೌನ್ ನಿಂದಾಗಿ ಜನರೆಲ್ಲಾ ಬೆಚ್ಚಗೆ ಮನೆಯಲ್ಲಿರುವಾಗ ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ನೆಡ್ಚಿಲು ಎಂಬಲ್ಲಿ ಸಾರ್ವಜನಿಕ ಬಸ್ ಸ್ಟಾಂಡ್ ಗೆ ಹೊಂದಿಕೊಂಡು ಅನಧಿಕೃತ ಅಂಗಡಿ ಕಟ್ಟಡವೊಂದು ತಲೆ ಎತ್ತಿ ನಿಂತಿದೆ.

ಸ್ಥಳೀಯ ವ್ಯಕ್ತಿಯೊಬ್ಬರು ಕೆಲ ಜನಪ್ರತಿನಿಧಿಗಳ ಕುಮ್ಮಕ್ಕು ನಿಂದ ಯಾವುದೇ ರೀತಿಯ ಅನುಮತಿ ಇಲ್ಲದೆ ಅಂಗಡಿ ತೆರೆದಿದ್ದಾರೆ.

ಮಹಿಳೆಯರು ಮತ್ತು ಮಕ್ಕಳು ಬಸ್ಸು ಮತ್ತು ಇತರ ವಾಹನಗಳಿಗೆ ಕಾಯಲು ನೆಡ್ಚಿಲು ಪರಿಸರದ ಜನರು ಈ ಈ ಬಸ್ ನಿಲ್ದಾಣವನ್ನು ಆಶ್ರಯಿಸುತ್ತಿದ್ದು, ಆದರೆ ಇದೀಗ ಅಂಗಡಿ ಎದುರು ಕೆಲವರು ಕುಳಿತು ಕಾಲಹರಣ ಮಾಡುವುದರಿಂದ ವಾಹನಕ್ಕಾಗಿ ಕಾಯುವ ಮಹಿಳೆಯರಿಗೆ ಮುಜುಗರ ಆಗುವುದರಲ್ಲಿ ಸಂದೇಹವಿಲ್ಲ.

ಈ ಕುರಿತು ಗ್ರಾಮಸ್ಥರು ಪ್ರತಿಭಟನೆ ಮಾಡುವ ಮೊದಲು, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಈ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!