ಬೆಂಗಳೂರು; ಸಿಎಂ ಫೋಟೋವನ್ನು ಬಳಸಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹೇಶ್ ವಿಕ್ರಮ್ ಹೆಗ್ಡೆ ಯನ್ನು ಮೂಡಬಿದಿರೆ ಪೊಲೀಸರು ಸೆಪ್ಟಂಬರ್ 12 ರಂದು ಬಂಧಿಸಿದ್ದಾರೆ.

ಪ್ರಕರಣದ ವಿವರ: ಮೂಡಬಿದರೆ ಠಾಣೆಯ ಪಿಎಸ್ ಐ ಕೃಷ್ಣಪ್ಪ ಪಿ ಅವರು ದಿನಾಂಕ 09/09/2025 ರಂದು ಠಾಣೆಯಲ್ಲಿದ್ದಾಗ ಸಮಯ ಸಂಜೆ ಸುಮಾರು 05-08 ಗಂಟೆಗೆ ಪೊಲೀಸ್ ಆಯುಕ್ತರ ಕಛೇರಿಯ ಸೋಷಿಯಲ್ ಮೀಡಿಯಾ ಸೆಲ್ ನಿಂದ ಇ -ಮೇಲ್ ಮೆಸೇಜ್ ಬಂದಿದ್ದು ಅದನ್ನು ಪರಿಶೀಲಿಸಿದಾಗ Face book ಖಾತೆಯ Screen Shot ಮತ್ತು Face book ಖಾತೆಯ ವಿವರವೊಂದು ದೊರೆತಿದೆ. ಅದನ್ನು ಪರಿಶೀಲಿಸಲಾಗಿ ಅದರಲ್ಲಿ Mahesh Vikram Hegde ಎಂಬವರು ಸಿದ್ದರಾಮಯ್ಯ – ರವರ ಫೋಟೋವನ್ನು Edit ಮಾಡಿ ಅದರಲ್ಲಿ “ಮಾನ್ಯ ಮುಖ್ಯ ಮಂತ್ರಿಗಳೇ, ಒಂದೇ ಒಂದು ಬಾರಿ ಗಣಪನ ಮೆರವಣಿಗೆಯ ಮೇಲೆ ಕಲ್ಲು ತೋರಿದವರ ಮಸೀದಿಯ ಮೇಲೆ ಬಜರ್ ನುಗ್ಗಿಸುವ ಧೈರ್ಯ ಮಾಡಿ ನೋಡಿ, ಮುಂದಿನ ವರ್ಷ ರಾಜ್ಯದ ಯಾವ ಮೂಲೆಯಲ್ಲೂ ಇಂತಹ ಪ್ರಕರಣ ಮರುಕಳಿಸುವುದಿಲ್ಲ ಎಂದು ಪೋಸ್ಟ್ ಮಾಡಿ ಈ ವಿಷಯವಾಗಿ ಎರಡು ಧರ್ಮಗಳ ನಡುವೆ ವೈರತ್ವ ಮತ್ತು ದ್ವೇಷ ಭಾವನೆ ಮೂಡಿಸಿ ಕೋಮುಗಲಭೆ ಸೃಷ್ಟಿಸುವಂತಹ ಹಾಗೂ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸುವಂತಹ ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆ ಆರೋಪಿ ಮಹೇಶ್ ವಿಕ್ರಮ್ ಹೆಗ್ಡೆ ಯನ್ನು ಮೂಡಬಿದರೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.


