Saturday, June 6, 2026
Homeಕರಾವಳಿಮಂಗಳೂರುಮೂಡಬಿದಿರೆ :ಚರಂಡಿಗೆ ಬಿದ್ದು ವ್ಯಕ್ತಿ ಸಾವು

ಮೂಡಬಿದಿರೆ :ಚರಂಡಿಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಮೂಡಬಿದಿರೆ :ಚರಂಡಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪುತ್ತಿಗೆ ಪದವಿನಲ್ಲಿ ನಡೆದಿದೆ. ಮಂಗಳೂರು ಕೊಣಾಜೆ ನಿವಾಸಿ ಮಾಧವ (45) ಮೃತರು.

ಮಾಧವ ಅವರು ಪುತ್ತಿಗೆ ಪದವಿನಲ್ಲಿ ಪುತ್ತಿಗೆ ಮಜ್ಜಿಗುರಿಯಲ್ಲಿರುವ ತನ್ನ ಸಹೋದರಿ ಮನೆಗೆ  ಜಾತ್ರೆಗೆಂದು ಬಂದಿದ್ದರು.ಜಾತ್ರೆ ಮುಗಿಸಿ ಬುಧವಾರ ಮಧ್ಯಾಹ್ನದ ವೇಳೆ ಹಿಂತಿರುಗಿ ಮಂಗಳೂರಿಗೆ ಹೊರಟಿದ್ದರು. ಆದರೆ ಸಂಜೆ ವೇಳೆಗೆ ಅವರ ಮೃತ ದೇಹ ಪುತ್ತಿಗೆ ಯುವಕ ಮಂಡಲದ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಮೂಡಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಸಿದು ಬಿದ್ದು ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!