Thursday, June 25, 2026
Homeಕರಾವಳಿಮಂಗಳೂರುಮೂಡಬಿದಿರೆ : ಹೊಸಂಗಡಿ ಕಾರು ಢಿಕ್ಕಿಯಾಗಿ ಬಾಲಕ ಮೃತ್ಯು

ಮೂಡಬಿದಿರೆ : ಹೊಸಂಗಡಿ ಕಾರು ಢಿಕ್ಕಿಯಾಗಿ ಬಾಲಕ ಮೃತ್ಯು

- Advertisement -
- Advertisement -

ಮೂಡಬಿದಿರೆ : ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕನೊಬ್ಬನಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟಿರುವ ಘಟನೆ ಹೊಸಂಗಡಿಯ ಮರೂರು ಸೇತುವೆ ಬಳಿ ಡಿ.31 ರಂದು ಮಧ್ಯಾಹ್ನ ನಡೆದಿದೆ.

ಮಂಗಳೂರು ನಗರದ ಮೂಡಬಿದಿರೆ ತಾಲೂಕಿನ ಮರೂರು ಗ್ರಾಮದ ಹೊಸಂಗಡಿ ನಝೀರ್ ಎಂಬವರ ಪುತ್ರ ಝಾಹಿರ್ (13) ಮೃತಪಟ್ಟ ಬಾಲಕನಾಗಿದ್ದಾನೆ.
ಝಾಹಿರ್ ಸ್ಥಳೀಯ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದು ಡಿ.31 ರಂದು ಮಧ್ಯಾಹ್ನ ಮರೂರು ಸೇತುವೆ ಬಳಿಯ ಅಂಗಡಿಗೆಂದು ನಡೆದುಕೊಂಡು ಹೋಗುತ್ತಿದ್ದನೆನ್ನಲಾಗಿದೆ.

ಈ ಸಂದರ್ಭದಲ್ಲಿ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ.ಪರಿಣಾಮ ಝಾಹಿರ್ ಮೃತಪಟ್ಟಿದ್ದಾನೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!