Thursday, June 4, 2026
Homeಕರಾವಳಿಕದ್ರಿ ದೇವಸ್ಥಾನದ ಹುಂಡಿ ಹಣ ಕಳವು ‌ಆರೋಪ : ವ್ಯವಸ್ಥಾಪನಾ ಸಮಿತಿ ಸದಸ್ಯೆ ವಿರುದ್ಧ ದೂರು

ಕದ್ರಿ ದೇವಸ್ಥಾನದ ಹುಂಡಿ ಹಣ ಕಳವು ‌ಆರೋಪ : ವ್ಯವಸ್ಥಾಪನಾ ಸಮಿತಿ ಸದಸ್ಯೆ ವಿರುದ್ಧ ದೂರು

- Advertisement -
- Advertisement -

ಮಂಗಳೂರು: ಕದ್ರಿ ಶ್ರೀ ಮಂಜುನಾಥಸ್ವಾಮಿ
ದೇವಸ್ಥಾನದ ಹುಂಡಿ ಎಣಿಕೆಯ ವೇಳೆ ಕಳ್ಳತನ ಆರೋಪ ವ್ಯಕ್ತವಾಗಿದೆ. ಎಣಿಕೆ ವೇಳೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಎಂಬವರು ನಿವೇದಿತಾ ಶೆಟ್ಟಿ ಕದ್ದಿರುವ ಆರೋಪ ಕೇಳಿ ಬಂದಿದೆ.

ಕಳ್ಳತನ ಕುರಿತು ಧಾರ್ಮಿಕ ಮತ್ತು ದತ್ತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ಮಂಗಳೂರಿನ ಶಕ್ತಿನಗರದ ತೇಜ್ ಪಾಲ್ ಸುವರ್ಣ ಎಂಬವರು ಸಿಸಿಟಿವಿ ಫೂಟೇಜ್ ಸಮೇತ ದೂರು ಸಲ್ಲಿಸಿದ್ದಾರೆ.

ಫೆಬ್ರವರಿ 24 ರಂದು ನಡೆದಿದ್ದ ಹುಂಡಿ ಎಣಿಕಾ ಕಾರ್ಯದ ವೇಳೆ ಕಳ್ಳತನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.‌

- Advertisement -

Latest News

error: Content is protected !!