Friday, May 3, 2024
Homeಕರಾವಳಿಪುತ್ತೂರಿನ ಈ ಗ್ರಾಮದಲ್ಲಿದೆ ಹಣ ಡಬಲ್ ಮಾಡುವ ಕಂಪೆನಿ !

ಪುತ್ತೂರಿನ ಈ ಗ್ರಾಮದಲ್ಲಿದೆ ಹಣ ಡಬಲ್ ಮಾಡುವ ಕಂಪೆನಿ !

spot_img
- Advertisement -
- Advertisement -

ಪುತ್ತೂರು: ದೇಶದ ಅನೇಕ ಪ್ರದೇಶದಲ್ಲಿ ಹಣ ದ್ವಿಗುಣ ಮಾಡುವ ಕಂಪೆನಿಗಳು ಶುರುವಾಗಿ ಮುಗ್ದ ಜನರಿಂದ ಲಕ್ಷಾಂತರ ಹಣವನ್ನು ಠೇವಣಿ ಇಡಿಸಿ ಕೊನೆಗೆ ಜನರಿಗೆ ಮೋಸ ಮಾಡಿದ ಸಾವಿರಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇರುವಾಗಲೇ ಕಡಬ ತಾಲೂಕಿನ ಗಡಿ ಭಾಗದಲ್ಲಿರುವ ಪುಟ್ಟ ಗ್ರಾಮದಲ್ಲಿ ಈಗ 28 ದಿನಗಳಲ್ಲಿ ಹಣ ಡಬ್ಬಲ್ ಮಾಡುವ ದಂಧೆಯೊಂದು ಪ್ರಾರಂಭವಾಗಿದೆ.

ಹೌದು, ಶಿರಾಡಿ ಗ್ರಾಮದ ಮತ್ತು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಉದನೆ ಎಂಬ ಪೇಟೆಯಲ್ಲಿ ಎಲಿಯಾ ಕನ್ ಸ್ಟ್ರಕ್ಷನ್ ಮತ್ತು ಬಿಲ್ಡರ್ಸ್ ಎನ್ನುವ ಹೆಸರಿನ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಈ ಕಂಪನಿಯು ಶಿರಾಡಿ ಗ್ರಾಮಪಂಚಾಯತ್ ನಲ್ಲಿ ಟ್ರೇಡ್ ಲೈಸೆನ್ಸ್ ಕೂಡ ಪಡೆದುಕೊಂಡಿದೆ. ಸ್ಥಳೀಯ ಗ್ರಾಮಸ್ಥರ ಪ್ರಕಾರ ಈ ಕಛೇರಿಯು ಕಳೆದ ನಾಲ್ಕು ತಿಂಗಳಿನಿಂದ ಉದನೆಯ ವಿಜಯ ಬ್ಯಾಂಕ್ ಇರುವ ಕಟ್ಟಡದ ಮೇಲಿನ ಮಹಡಿಯಲ್ಲಿ ಎಲಿಯಾ ಕನ್ ಸ್ಟ್ರಕ್ಷನ್ ಮತ್ತು ಬಿಲ್ಡರ್ಸ್ ಕಾರ್ಯಾಚರಿಸುತ್ತಿದ್ದು, ಒಂದು ಲಕ್ಷ ನೀಡಿದಲ್ಲಿ 28 ದಿನಗಳ ಬಳಿಕ ಎರಡು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳುತ್ತಿದೆ.

ಅಡಿಕೆ ಕೃಷಿಕರೆ ಟಾರ್ಗೆಟ್
ಶಿರಾಡಿ, ರೆಖ್ಯ, ಕೊಣಾಜೆ ಗ್ರಾಮಗಳಲ್ಲಿ ಅಡಿಕೆ ಕೃಷಿ ಮಾಡುವ ಆನೇಕ ಕೃಷಿಕರಿದ್ದು, ಈ ಬಾರಿ ಅಡಿಕೆಗೆ ಉತ್ತಮ ಬೆಲೆ ಕೂಡ ಬಂದಿದೆ. ಅಡಿಕೆ ಕೃಷಿಕರನ್ನೇ ಟಾರ್ಗೆಟ್ ಮಾಡುವ ಈ ಸಂಸ್ಥೆ, ಅಡಿಕೆ ಮಾರಿರುವ ಸುದ್ದಿ ಗೊತ್ತಾದ ತಕ್ಷಣ ಮರುದಿನ ಬೆಳಗ್ಗೆಯೇ ಹಣ ದ್ವಿಗುಣ ಮಾಡುವ ಕಂಪೆನಿಯ ಏಜೆಂಟರು ಕೃಷಿಕರ ಮನೆ ಮುಂದೆ ಹಾಜರಿರುತ್ತಾರೆ ಎನ್ನಲಾಗಿದೆ. ಊರಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುಟ್ಟುರುವ ಮುಗ್ದರಿಗೆ 28 ದಿನಗಳಲ್ಲಿ ಹಣ ಡಬಲ್ ಮಾಡುವ ಆಸೆ ತೋರಿಸಿ ಎಲಿಯಾ ಕನ್ ಸ್ಟ್ರಕ್ಷನ್ ಮತ್ತು ಬಿಲ್ಡರ್ಸ್ ನಲ್ಲಿ ಠೇವಣಿ ಇಡಿಸಿಕೊಳ್ಳುತ್ತಾರೆ.

ಪ್ರತಿನಿಧಿಗಳಿಗೆ ಭರ್ಜರಿ ಕಮಿಷನ್:
ಕಂಪನಿಯು ಶಿರಾಡಿ, ರೆಖ್ಯ, ಕೊಣಾಜೆ ಗ್ರಾಮಗಳಲ್ಲಿ ತನ್ನ ಪ್ರತಿನಿಧಿಗಳನ್ನು ಫೀಲ್ಡ್ ವರ್ಕ್ ಗೆ ಬಿಟ್ಟಿದ್ದು, ಗ್ರಾಮಸ್ಥರಿಗೆ ಹಣ ದ್ವಿಗುಣ ಮಾಡಿಕೊಡುವ ಅಮಿಷ ನೀಡುತ್ತಿದೆ. ಇನ್ನು ಪ್ರತಿನಿಧಿಗಳಿಗೆ ಯಾವುದೇ ರೀತಿಯ ಗುರುತಿನ ಚೀಟಿ ನೀಡಿಲ್ಲದೆ ಇದ್ದರೂ, ತಮ್ಮ ಮೂಲಕ ಜನರು ಇಡುವ ಹಣಕ್ಕೆ ಶೇ.20 ರಷ್ಟು ಕಮಿಷನ್(1 ಲಕ್ಷ ರೂಗೆ 20 ಸಾವಿರ) ನೀಡಲಾಗುತ್ತಿದೆ. ಜನರು ಹಣ ಹೂಡಿಕೆ ಮಾಡಿದ 10 ದಿನದ ಒಳಗೆ ಪ್ರತಿನಿಧಿಗಳ ಕಮಿಷನ್ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎನ್ನಲಾಗಿದೆ. ಇಲ್ಲಿಯ ಸ್ಥಳೀಯ ಶಾಲೆಯ ಶಿಕ್ಷಕರೊಬ್ಬರು ಸದ್ದಿಲ್ಲದೇ ಈ ಕಂಪನಿಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವುದು ದುರದೃಷ್ಟಕರ.

ಸ್ವಸಹಾಯ ಸಂಘದಿಂದ ಸಾಲ ಪಡೆದು ಹೂಡಿಕೆ
ಈಗಾಗಲೇ 200 ಕ್ಕೂ ಮಿಕ್ಕಿದ ಗ್ರಾಹಕರಿಂದ ಕೋಟ್ಯಂತರ ರೂ ಹಣವನ್ನು ಈ ಕಂಪನಿಯೂ ಹೂಡಿಕೆಯಾಗಿ ಪಡೆದುಕೊಂಡಿದೆ. ಹಾಗೆಯೆ ಶಿರಾಡಿ, ರೆಖ್ಯ, ಕೊಣಾಜೆ ಗ್ರಾಮದ ಮಹಿಳೆಯರು ಶ್ರೀ ಶಕ್ತಿ ಹಾಗೂ ಸ್ವಸಹಾಯ ಗುಂಪುಗಳಿಂದ ಬಡ್ಡಿಗೆ ಹಣ ಪಡೆದು ಹಣ ದ್ವಿಗುಣಗೊಳ್ಳುವ ಆಸೆಯಿಂದ ಕಂಪನಿಯಲ್ಲಿ ಹಣ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೂಡ ಈ ಸಂಸ್ಥೆಯ ಮೇಲಿದೆ.

ದಾಖಲೆ ಇಲ್ಲದ ಕಂಪೆನಿ:
ಆದರೆ ಕಂಪನಿಗೆ ಸಂಬಂಧಪಟ್ಟ, ಸ್ಕೀಮ್ ಗೆ ಸಂಬಂಧಪಟ್ಟ ಯಾವುದೇ ಕರಪತ್ರಗಳಾಗಲೀ, ಕಛೇರಿ ನಡೆಸುತ್ತಿರುವ ವ್ಯವಹಾರದ ಬಗ್ಗೆ ಯಾವುದೇ ದಾಖಲೆ ಪತ್ರಗಳೂ ಇಲ್ಲಿಲ್ಲ. ಕನ್ ಸ್ಟ್ರಕ್ಷನ್ ಕಂಪನಿಗಳ ವೆಬ್ ಸೈಟ್ ಗಳಲ್ಲಿ ಎಲಿಯಾ ಹೆಸರಿನ ಕಂಪನಿಯ ಉಲ್ಲೇಖವಿದ್ದರೂ, ಕೆಲವು ಸೈಟ್ ಗಳಲ್ಲಿ ಕಂಪನಿಯ ಯಾವುದೇ ವ್ಯವಹಾರದ ಬಗ್ಗೆ ಉಲ್ಲೇಖವಿಲ್ಲ ಎನ್ನಲಾಗಿದೆ.

- Advertisement -
spot_img

Latest News

error: Content is protected !!