Saturday, June 6, 2026
Homeಕರಾವಳಿಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ

- Advertisement -
- Advertisement -

ಮಂಗಳೂರು: ನಗರದ ಬಜಪೆ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಿಕ ಕರೆಯಿಂದಾಗಿ ಕೆಲಹೊತ್ತುಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ಬೆಂಗಳೂರು ಗಲಭೆ ಹಾಗೂ ಶಂಕಿತ ಉಗ್ರನ ಬಂಧನ ವರದಿಗಳ ಬೆನ್ನಲ್ಲೇ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಹುಸಿ ಬಾಂಬ್ ಕರೆ ಬಂದಿದೆ.

ಪೊಲೀಸರ ತಪಾಸಣೆ ಬಳಿಕ ಅದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಖಾತ್ರಿಯಾಯಿತು. ಕರೆಯಿಂದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸವಂತಾಯಿತು.

ಸಿಐಎಸ್ ಎಫ್ ಸಿಬ್ಬಂದಿ ಸೇರಿ ಪೊಲೀಸರಿಂದ ಸಂಪೂರ್ಣ ಏರ್ ಪೋರ್ಟ್ ನ ತಪಾಸಣೆ ನಡೆಸಲಾಯಿತು. ಈ ಕುರಿತು ಏರ್ ಪೋರ್ಟ್ ಅಧಿಕಾರಿಗಳು ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Latest News

error: Content is protected !!