Thursday, June 4, 2026
Homeತಾಜಾ ಸುದ್ದಿ"ಮಂಗಳೂರಿನ ರೋಡ್‌ ಶೋ ಸ್ಮರಣೀಯವಾಗಿತ್ತು,": ಎಕ್ಸ್ ನಲ್ಲಿ ಕುಡ್ಲದ ರೋಡ್ ಶೋವನ್ನು ಸ್ಮರಿಸಿದ ಪ್ರಧಾನಿ ಮೋದಿ

“ಮಂಗಳೂರಿನ ರೋಡ್‌ ಶೋ ಸ್ಮರಣೀಯವಾಗಿತ್ತು,”: ಎಕ್ಸ್ ನಲ್ಲಿ ಕುಡ್ಲದ ರೋಡ್ ಶೋವನ್ನು ಸ್ಮರಿಸಿದ ಪ್ರಧಾನಿ ಮೋದಿ

- Advertisement -
- Advertisement -

ನವದೆಹಲಿ: “ಮಂಗಳೂರಿನ ರೋಡ್‌ ಶೋ ಸ್ಮರಣೀಯವಾಗಿತ್ತು,” ಎಂದು ಎಕ್ಸ್ ನಲ್ಲಿ ಕುಡ್ಲದ ರೋಡ್ ಶೋವನ್ನು ಸ್ಮರಿಸಿದ ಪ್ರಧಾನಿ ಮೋದಿ ಸ್ಮರಿಸಿದ್ದಾರೆ.

ಭಾನುವಾರ ಮಂಗಳೂರು ನಗರದಲ್ಲಿ ತಾವು ನಡೆಸಿದ ರೋಡ್‌ ಶೋ “ಸ್ಮರಣೀಯವಾಗಿತ್ತು” ಮತ್ತು ಮೈಸೂರಿನಲ್ಲಿ ತಾವು ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ವೇದಿಕೆ ಹಂಚಿಕೊಂಡ ಸಾರ್ವಜನಿಕ ಸಭೆ “ಅತ್ಯಪೂರ್ವ” ಎಂದು ಪ್ರಧಾನಿ ನರೇಂದ್ರ ಮೋದಿ ಎಂದು ವರ್ಣಿಸಿದ್ದಾರೆ.

“ಕರ್ನಾಟಕದಾದ್ಯಂತ ಬಿಜೆಪಿ ಮತ್ತು ಜೆಡಿ(ಎಸ್‌)ಗೆ ಇರುವ ಬೆಂಬಲ ಅತ್ಯುತ್ತಮವಾಗಿದೆ. ಜನರು ಕಾಂಗ್ರೆಸ್‌ನಿಂದ ಬೇಸತ್ತಿದ್ದಾರೆ ಮತ್ತು ನಮ್ಮ ಮೈತ್ರಿಕೂಟ ಗೆಲ್ಲಬೇಕೆಂದು ಬಯಸುತ್ತಿದ್ದಾರೆ, ನಮ್ಮ ಮಾಜಿ ಪ್ರಧಾನಿ ರ್ಯಾಲಿಗೆ ಆಗಮಿಸಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ನನಗೆ ಬಹಳ ವಿಶೇಷವಾಗಿದೆ,” ಎಂದು ಪ್ರಧಾನಿ ಹೇಳಿದ್ದಾರೆ.

ದೇವೇಗೌಡ ಕೂಡ ಇಂದು ಪೋಸ್ಟ್‌ ಮಾಡಿ, ಮೈಸೂರಿನಲ್ಲಿ ನಡೆದ ಎನ್‌ಡಿಎ ರ್ಯಾಲಿ ಭಾರೀ ಯಶಸ್ವಿಯಾಗಿದೆ ಎಂದಿದ್ದಾರೆ. “ಪ್ರಧಾನಿಯೊಂದಿಗೆ ಮಾತನಾಡಿ ಖುಷಿಯಾಯಿತು. ರಾಜ್ಯದಲ್ಲಿ ಮೈತ್ರಿಕೂಟಕ್ಕೆ 28 ಸ್ಥಾನಗಳನ್ನು ಗಳಿಸಲು ಹಾಗೂ ದೇಶದಲ್ಲಿ 400 ಸ್ಥಾನಗಳನ್ನು ತಲುಪಲು ಕೊಡುಗೆ ನೀಡಲು ಶ್ರಮಿಸುತ್ತೇವೆ,” ಎಂದು ಅವರು ಬರೆದಿದ್ದಾರೆ.

- Advertisement -

Latest News

error: Content is protected !!