Saturday, May 18, 2024
Homeತಾಜಾ ಸುದ್ದಿಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಹಂಚಿಕೊಂಡ ಅದ್ಭುತ ವಿಡಿಯೋಗೆ ನೆಟ್ಟಿಗರು ಫಿದಾ

ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಹಂಚಿಕೊಂಡ ಅದ್ಭುತ ವಿಡಿಯೋಗೆ ನೆಟ್ಟಿಗರು ಫಿದಾ

spot_img
- Advertisement -
- Advertisement -

ನವದೆಹಲಿ :  ಪ್ರಧಾನಿ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಬೇರೆ ಬೇರೆ ಉತ್ತಮವಾದ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಪ್ರಾಣಿ-ಪಕ್ಷಿ ಪ್ರಿಯರು ಆಗಿರುವ ಮೋದಿ ಅವರು ಸದ್ಯ ಸುಂದರವಾದ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಹೌದು..3000ಕ್ಕೂ ಹೆಚ್ಚುಕೃಷ್ಣ ಮೃಗಗಳು ರಸ್ತೆ ದಾಟುತ್ತಿರುವ ವಿಡಿಯೋವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಗುಜರಾತಿನ ಭಾವನಗರ್​ನಲ್ಲಿನ ರಾಷ್ಟ್ರೀಯ ಉದ್ಯಾನವನದ ದೃಶ್ಯ ಇದಾಗಿದ್ದು, ಅದ್ಭುತ ಎಂದು ಶೀರ್ಷಿಕೆ ನೀಡುವುದರ ಮೂಲಕ ವಿಡಿಯೋ ಹಂಚಿಕೊಳ್ಳಲಾಗಿದೆ. ವೇಲವದರ್ ಕೃಷ್ಣಮೃಗ ರಾಷ್ಟ್ರೀಯ ಉದ್ಯಾನವನದ ಈ ಸುಂದರ ದೃಶ್ಯವನ್ನು ಗುಜರಾತಿನ ಮಾಹಿತಿ ಇಲಾಖೆ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ರೀ ಟ್ವೀಟ್ ಮಾಡಿದ್ದಾರೆ.

ಇಲಾಖೆಯ ಪ್ರಕಾರ 3,000ಕ್ಕೂ ಹೆಚ್ಚು ಕೃಷ್ಣ ಮೃಗಗಳು ರಸ್ತೆಯಲ್ಲಿ ಎತ್ತರಕ್ಕೆ ಹಾರುತ್ತಿವೆ. ಒಂದಾದ ಮೇಲೊಂದು ಸಾಲಿನಲ್ಲಿ ರಸ್ತೆ ದಾಟುತ್ತಿರುವುದು ನೋಡಲು ಅದ್ಭುತ ದೃಶ್ಯವಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!