- Advertisement -
![]()
- Advertisement -
ಬೆಂಗಳೂರು: ಬಿಜೆಪಿ ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭರ್ಜರಿ ರೋಡ್ ಶೋ ನಡೆಸಲು ಮುಂದಾಗಿದೆ.
ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗ ವಾಣಿಜ್ಯ ಸಂಚಾರಕ್ಕೆ ಸಜ್ಜಾಗಿದ್ದು, ಈ ಸಂದರ್ಭದಲ್ಲ ಬಿಜೆಪಿ ಅರ್ಧ ಕಿ.ಮೀ ರೋಡ್ ಶೋ ಕೂಡ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಇನ್ನು ಅಧಿಕೃತವಾಗಿ ರೋಡ್ ಶೋ ಕುರಿತು ಮಾಹಿತಿ ಲಭ್ಯವಾಗಿಲ್ಲವಾದರೂ ಆಗಸ್ಟ್ 10 ರಂದು ಹಳದಿ ಮಾರ್ಗ ಉದ್ಘಾಟನೆಯಾದ ನಂತರ ಮೋದಿ ಅವರು ನಗರದ ಆಯ್ದ ಪ್ರದೇಶದಲ್ಲಿ ರೋಡ್ ಶೋ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯ ಬಿಜೆಪಿ ನಾಯಕರು ರೋಡ್ ಶೋ ಬಗ್ಗೆ ಸ್ಥಳಗಳ ಮಾಹಿತಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಂದ ದೃಢಪಟ್ಟ ಬಳಿಕ ಇದು ಅಂತಿಮವಾಗಲಿದೆ ಎಂದು ತಿಳಿದು ಬಂದಿದೆ.
- Advertisement -


