- Advertisement -
- Advertisement -
ಕೊಡಗು: ಇಂದು ಬೆಳ್ಳಂ ಬೆಳಗ್ಗೆ ಮೊಬೈಲ್ ಒತ್ತಿಕೊಂಡು ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯೋರ್ವ ಕಾಡಾನೆಗೆ ಡಿಕ್ಕಿಹೊಡೆದ ಘಟನೆ ಕೊಡಗಿನ ವಿರಾಜಪೇಟೆಯ ಚಿನ್ನಂಗೊಳ್ಳಿ ಗೋಣಿಕೊಪ್ಪ-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.
ಬಾಲಾಜಿ ಗ್ರಾಮದ ಸುರೇಶ್ ಬಾಬು (46) ಆನೆಗೆ ಡಿಕ್ಕಿ ಹೊಡೆದ ವ್ಯಕ್ತಿ.
ಮೊಬೈಲ್ ನಲ್ಲೆ ತಲ್ಲೀನರಾಗಿದ್ದ ಈ ವ್ಯಕ್ತಿ ಆನೆಗೆ ಡಿಕ್ಕಿ ಹೊಡೆದಿದ್ದು ಕೋಪಗೊಂಡ ಆನೆ ಕಾಲಿನಲ್ಲಿ ಒದ್ದು ಸೊಂಡಿಲಿನಲ್ಲಿ ವ್ಯಕ್ತಿಯನ್ನು ಬಿಸಾಡಿದೆ. ಅಲ್ಲಿವರೆಗೆ ಲೋಕದ ಪರಿವೆ ಇಲ್ಲದ ಸುರೇಶ ಬಾಬುಗೆ ತಕ್ಷಣ ಗರ ಬಡಿದಂತಾಯಿತು. ಆನೆಯ ಸೊಂಡಿಲಿನಿಂದ ಪವಾಡ ಸದೃಶವಾಗಿ ಬದುಕಿ ಬಂದ ಅದೃಷ್ಟವಂತ ಈ ರೋಚಕ ಅನುಭವವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ.
- Advertisement -