- Advertisement -
- Advertisement -
ಬಂಟ್ವಾಳ: ಕೊರೊನ ಮಹಾಮಾರಿಯ ವಿರುದ್ಧ ಯೋಧರಂತೆ ದುಡಿಯುತ್ತಿರುವ ಬಂಟ್ವಾಳ ವೃತ್ತ ನೀರಿಕ್ಷಕ ಟಿ.ಡಿ ನಾಗರಾಜ್, ಬಂಟ್ವಾಳ ನಗರ ಠಾಣೆಗೆ ಎಸ್.ಐ.ಅವಿನಾಶ್, ಸಂಚಾರಿ ಠಾಣೆಗೆ ಎಸ್.ಐ.ರಾಜೇಶ್ ಕೆ.ವಿ ಮತ್ತು ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಗಳಿಗೆ ಭಾರತೀಯ ಜೈನ್ ಮಿಲನ್ ಪದಾಧಿಕಾರಿಗಳು ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ಹೆಲ್ತ್ ಕಿಟ್ ಅನ್ನು ಶ್ರೀ ದೇವಿ ಮೆಡಿಕಲ್ ಸಹಯೋಗದೊಂದಿಗೆ ನೀಡಿದರು.
ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8, ಮಂಗಳೂರು ವಿಭಾಗದ ಅಧ್ಯಕ್ಷ ಸುದರ್ಶನ್ ಜೈನ್, ಕಾರ್ಯದರ್ಶಿ ಸುಭಾಷ್ ಚಂದ್ರ ಜೈನ್, ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಡಾ.ಸುದೀಪ್ ಕುಮಾರ್, ಕಾರ್ಯದರ್ಶಿ ಸನ್ಮತಿ ಜಯಕೀರ್ತಿ, ಉಪಾಧ್ಯಕ್ಷ ಹರ್ಷರಾಜ್ ಬಲ್ಲಾಳ್ ಉಪಸ್ಥಿತರಿದ್ದರು.
- Advertisement -