Saturday, June 6, 2026
Homeಕರಾವಳಿಮೊಬೈಲ್‌ ಕದ್ದ ಕೇವಲ ಒಂದೂವರೆ ಗಂಟೆಯಲ್ಲಿ ಕಳ್ಳರು ಅಂದರ್!.. ಮಂಗಳೂರು ನಗರದ ಪೊಲೀಸರ ಕ್ಷಿಪ್ರ ಕಾರ್ಯಚರಣೆ

ಮೊಬೈಲ್‌ ಕದ್ದ ಕೇವಲ ಒಂದೂವರೆ ಗಂಟೆಯಲ್ಲಿ ಕಳ್ಳರು ಅಂದರ್!.. ಮಂಗಳೂರು ನಗರದ ಪೊಲೀಸರ ಕ್ಷಿಪ್ರ ಕಾರ್ಯಚರಣೆ

- Advertisement -
- Advertisement -

ಮಂಗಳೂರು: ಇಲ್ಲಿನ ಕರಂಗಲ್ಪಾಡಿಯಲ್ಲಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾರ್ಮಿಕರು ಮಧ್ಯಾಹ್ನದ ಸಂದರ್ಭ ಮಲಗಿದ್ದಾಗ ಮೊಬೈಲ್‌ಗಳನ್ನು ಕಳವು ಮಾಡಲಾಗಿತ್ತು ಈ ಬಗ್ಗೆ ಕಾರ್ಮಿಕರು ಶನಿವಾರ ಸಂಜೆ 5 ಗಂಟೆಗೆ ಪೊಲೀಸರಿಗೆ ದೂರು ನೀಡಿದ್ದರು. ಮೊಬೈಲ್‌ ಕದ್ದ ಕೇವಲ ಒಂದೂವರೆ ಗಂಟೆಯಲ್ಲಿ ಮಂಗಳೂರು ನಗರದ ಪೊಲೀಸರು ಕಳ್ಳತನ ಪ್ರಕರಣವನ್ನು ಬೇಧಿಸಿದ್ದು, ಕಳ್ಳರಿಂದ 11 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಈ ಶೀಘ್ರ ಕಾರ್ಯಾಚರಣೆ ಶ್ಲಾಘನೆಗೆ ಕಾರಣವಾಗಿದೆ. ಉತ್ತರ ಠಾಣೆಯ ಇನ್ಸ್ ಪೆಕ್ಟರ್ ಗೋವಿಂದರಾಜು.ಬಿ, ಅವರ ಪೊಲೀಸ್‌ ತಂಡವು ಕಾರ್ಯಪ್ರವೃತ್ತವಾಗಿದ್ದು, ಸಂಜೆ ಸುಮಾರು 6.45 ಕ್ಕೆ ಮಂಗಳೂರು ನಗರದ ಲಾಡ್ಜ್ ನಲ್ಲಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂದಿತ ಆರೋಪಿಗಳು ಬೆಂಗ್ರೆ ನಿವಾಸಿಗಳಾದ ಮೊಹಮ್ಮದ್ ಸುಹೈಲ್, ಮೊಹಮ್ಮದ್ ಸರ್ಫ್ರಾಜ್, ಮೊಹಮ್ಮದ್ ಸಫ್ವಾನ್ ಆರೋಪಿಗಳಿಂದ ಎರಡು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕ್ಷಿಪ್ರ ಕಾರ್ಯಚರಣೆ ನಡೆಸಿರುವ ಬಗ್ಗೆ ಪೊಲೀಸರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಶ್ಲಾಘಿಸಿದ್ದಾರೆ.

- Advertisement -

Latest News

error: Content is protected !!