Monday, June 8, 2026
Homeತಾಜಾ ಸುದ್ದಿಕೊರೋನ ಕಾರಣಕ್ಕೆ ಮಂಕಾಗುತ್ತಾ ವಿಶ್ವವಿಖ್ಯಾತ ಜಂಬೂಸವಾರಿ?..

ಕೊರೋನ ಕಾರಣಕ್ಕೆ ಮಂಕಾಗುತ್ತಾ ವಿಶ್ವವಿಖ್ಯಾತ ಜಂಬೂಸವಾರಿ?..

- Advertisement -
- Advertisement -

ಮೈಸೂರು: ರಾಜ್ಯದಲ್ಲಿ ಕೊರೋನ ಆರ್ಭಟ ಹೆಚ್ಚಾಗಿದೆ. ಕೊರೊನಾ ಕಾರಣದಿಂದ ಈ ಬಾರಿಯ ದಸರಾ ಆಚರಣೆಯನ್ನ ತುಂಬಾನೇ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ನಡೆಯುವ ಉದ್ಘಾಟನೆ ಕಾರ್ಯಕ್ರಮಕ್ಕೆ 250ಮಂದಿ, ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 1ಸಾವಿರ, ಜಂಬೂಸವಾರಿಗೆ 2ಸಾವಿರ ಜನ ಸೇರಿಸಲು ಚಿಂತನೆ ನಡೆಸಿದ್ದೇವೆ ಎಂದು ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್ ತಿಳಿಸಿದ್ದಾರೆ.

ಹೆಚ್ಚು ಮಂದಿ ಸೇರಿಸಿದರೆ ಕೊರೋನಾ ಹರಡುವ ಸಾಧ್ಯತೆ ಇದೆ. ಇಂತಿಷ್ಟು ಜನರಿಗೆ ಅನುಮತಿ ನೀಡಿ ಎಂದು ನಾವು ಮನವಿ ಮಾಡಿದ್ದೇವೆ. ನೋಡೋಣ ಕೇಂದ್ರ ಹಾಗೂ ಮುಖ್ಯಕಾರ್ಯದರ್ಶಿಗಳು ಹೇಗೆ ಅನುಮತಿ ನೀಡುತ್ತಾರೋ ಹಾಗೇ ಕಾರ್ಯಕ್ರಮ ರೂಪಿಸೋಣ ಎಂದು ಸಚಿವ ಎಸ್‌.ಟಿ. ಸೋಮಶೇಖರ್ ಹೇಳಿದರು. ಪ್ರಖ್ಯಾತ ಜಂಬೂಸವಾರಿ ಈ ಬಾರಿ ಕೊರೋನ ಕಾರಣಕ್ಕೆ ಮಂಕಾಗುವ ಲಕ್ಷಣಗಳು ಗೋಚರವಾಗುತ್ತಿವೆ.

- Advertisement -

Latest News

error: Content is protected !!