Thursday, June 4, 2026
Homeತಾಜಾ ಸುದ್ದಿಮೊಬೈಲ್ ಕದ್ದು ಮೊಬೈಲ್ ನ ಮಾಲೀಕರ ಬಳಿಯೇ ಪಾಸ್ವರ್ಡ್ ಕೇಳಿದ ಖದೀಮ

ಮೊಬೈಲ್ ಕದ್ದು ಮೊಬೈಲ್ ನ ಮಾಲೀಕರ ಬಳಿಯೇ ಪಾಸ್ವರ್ಡ್ ಕೇಳಿದ ಖದೀಮ

- Advertisement -
- Advertisement -

ಬೆಳಗಾವಿ: ಐನಾತಿ ಕಳ್ಳನೊಬ್ಬ ಮೊಬೈಲ್ ಕದ್ದು ಅದನ್ನು ಓಪನ್ ಮಾಡಲು ಸಾಧ್ಯವಾಗದ ಮೊಬೈಲ್ ಮಾಲೀಕರಲ್ಲೇ ಪಾಸ್ವರ್ಡ್ ಕೇಳಿದ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ನಡೆದಿದೆ.

ಹಿರೇಬಾಗೇವಾಡಿ ಬಸವನಗರದ ನಾಗನಗೌಡ ಪಾಟೀಲ್ ಎಂಬವರ ಮನೆಗೆ ನುಗ್ಗಿದ ಕಳ್ಳ ಸುಮಾರು 15 ಸಾವಿರ ರೂ. ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದಾನೆ.

ಮೊಬೈಲ್ ಕಳುವಾಗಿರುವುದು ಅರಿವಿಗೆ ಬರುತ್ತಿದ್ದಂತೆ ನಾಗನಗೌಡ ಪಾಟೀಲ್ ಮತ್ತೊಂದು ಮೊಬೈಲ್ನಿಂದ ತಮ್ಮ ಮೊಬೈಲ್ ಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಾಗಲೇ ಪಾಸ್ವರ್ಡ್ ಇಲ್ಲದೆ ಮೊಬೈಲ್ ಅನ್ಲಾಕ್ ಮಾಡಲು ಸಾಧ್ಯವಾಗದ ಕಳ್ಳ ಹತಾಶನಾಗಿದ್ದ ಎನ್ನಲಾಗಿದೆ.

ನಾಗನಗೌಡ ಪಾಟೀಲ್ ಅವರಿಂದ ಕರೆ ಬರುತ್ತಿದ್ದಂತೆ ಅದನ್ನು ಕಳ್ಳ ಸ್ವೀಕರಿಸಿದ್ದು, ಪಾಸ್ವರ್ಡ್ ಕೊಡಿ ಎಂದು ಗದರಿಸಿದ್ದಾನೆ. ಇದೀಗ ನಾಗನಗೌಡ ಪಾಟೀಲ್ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.

- Advertisement -

Latest News

error: Content is protected !!