Monday, May 20, 2024
Homeಕರಾವಳಿಬೆಳ್ತಂಗಡಿ: ಕೋವಿಡ್-19 ಮೊಬೈಲ್ ಫಿವರ್ ಕ್ಲಿನಿಕ್ ಕಾರ್ಯಾರಂಭ

ಬೆಳ್ತಂಗಡಿ: ಕೋವಿಡ್-19 ಮೊಬೈಲ್ ಫಿವರ್ ಕ್ಲಿನಿಕ್ ಕಾರ್ಯಾರಂಭ

spot_img
- Advertisement -
- Advertisement -

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಮಂಗಳೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ ಕೋವಿಡ್ 19 ಆರೋಗ್ಯ ತಪಾಸಣೆಗಾಗಿ ವಿನ್ಯಾಸಗೊಳಿಸಿದ ಮೊಬೈಲ್ ಫಿವರ್ ಕ್ಲಿನಿಕ್ ಬೆಳ್ತಂಗಡಿ ತಾಲೂಕಿನಾದ್ಯಂತ ಬುಧವಾರ ಕಾರ್ಯಾರಂಭಗೊಳಿಸಿದೆ.

ಉಜಿರೆಯಲ್ಲಿ ಇಂದು ಮೊಬೈಲ್ ಕ್ಲಿನಿಕ್ ಗೆ ಚಾಲನೆ ನೀಡಲಾಗಿದ್ದು, ಪ್ರತಿ ಬುಧವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಲಿದೆ. ಬುಧವಾರದಂದು ಉಜಿರೆ, ಸೋಮಂತಡ್ಕ, ಬೆಳ್ತಂಗಡಿ, ಗುರುವಾಯನಕೆರೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿಯ ಥರ್ಮಲ್ ಸ್ಕ್ಯಾನಿಂಗ್ ನಡೆಸಿದೆ.

ಮೊಬೈಲ್ ಕ್ಲಿನಿಕ್ ನಲ್ಲಿ ವೈದ್ಯೆ ಡಾ.ಸುಮನಾ ನಂದಕುಮಾರ್ ತಂತ್ರಿ, ಲ್ಯಾಬ್ ಟೆಕ್ಷಿಶನ್ ವೆಂಕಟೇಶ್, ಕಿರಿಯ ಆರೋಗ್ಯ ಸಹಾಯಕಿ ಪೊನ್ನಮ್ಮ ಕಾರ್ಯ ನಿರ್ವಹಿಸಲಿದ್ದಾರೆ. ಮೊಬೈಲ್ ಕ್ಲಿನಿಕ್ ಬಸ್ ನ್ನು ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮದೊಂದಿಗೆ ಸುಸಜ್ಜಿತವಾಗಿ ವಿನ್ಯಾಸಗೊಳಿಸಲಾಗಿದ್ದು, ಜನರ ಆರೋಗ್ಯ ತಪಾಸಣೆಗೆ ಜಿಲ್ಲಾಡಳಿತದ ಸ್ಪಂದನೆಗೆ ಜನರು ಶ್ಲಾಘಿಸಿದ್ದಾರೆ.

- Advertisement -
spot_img

Latest News

error: Content is protected !!