Friday, May 3, 2024
Homeಕರಾವಳಿಮದ್ಯದಂಗಡಿ ತೆರೆದರೂ ವ್ಯಸನಿಗಳಾಗದೇ ಇರುವುದು ಶ್ರೇಷ್ಠ ಸಾಧನೆ: ಡಾ.ಡಿ.ವೀರೇಂದ್ರ ಹೆಗ್ಗಡೆ

ಮದ್ಯದಂಗಡಿ ತೆರೆದರೂ ವ್ಯಸನಿಗಳಾಗದೇ ಇರುವುದು ಶ್ರೇಷ್ಠ ಸಾಧನೆ: ಡಾ.ಡಿ.ವೀರೇಂದ್ರ ಹೆಗ್ಗಡೆ

spot_img
- Advertisement -
- Advertisement -

ಬೆಳ್ತಂಗಡಿ: ಲಾಕ್ ಡೌನ್ ಅವಧಿಯಲ್ಲಿ ಕುಡಿತ ಬಿಟ್ಟವರು ಅದೃಷ್ಟವಂತರಾಗಿದ್ದಾರೆ. ಅನಿವಾರ್ಯವಾಗಿ ಯಾವುದೇ ಒತ್ತಡವಿಲ್ಲದೆ ವ್ಯಸನಮುಕ್ತರಾಗಲು, ಸ್ವ ವಿಮರ್ಶೆಯಿಂದ ಸ್ವ ನಿರ್ಧಾರ ಕೈಗೊಳ್ಳಲು ಅವರಿಂದ ಸಾಧ್ಯವಾಗಿದೆ. ಸ್ವಂತ ಪ್ರಯತ್ನಕ್ಕೆ ಸಿಗುವ ಸಂತೋಷದ ಬೆಲೆಯನ್ನು ಅರ್ಥ ಮಾಡಿಕೊಂಡು ಶಾಶ್ವತ ಪಾನಮುಕ್ತಿಗೆ ಪ್ರಯತ್ನಿಸಬೇಕು. ಮದ್ಯದಂಗಡಿ ತೆರೆದ ಸಂದರ್ಭದಲ್ಲೂ ವ್ಯಸನಿಗಳಾಗದೆ, ಉಳಿಯುವುದು ಹಾಗೂ ಬೆಳೆಯುವುದು ಶ್ರೇಷ್ಠ ಸಾಧನೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯ ಪಟ್ಟಿದ್ದಾರೆ.

Those de-addicted from alcohol during lockdown are truly blessed. Now that alcohol outlets are open, remain persistent and free from it.

Posted by Sri Dharmasthala Manjunatha Temple on Wednesday, 6 May 2020

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಂಚಾಲಕ ಡಾ. ಎಲ್.ಹೆಚ್. ಮಂಜುನಾಥ್ ಅವರು, ವ್ಯಸನಮುಕ್ತರು ಸ್ವ ಉದ್ಯೋಗಿಗಳಾಗಿ ಬದಲಾಗಬೇಕು, ಅವರದ್ದೇ ಆದ ಸ್ವಸಹಾಯ ಸಂಘಗಳನ್ನು ರಚಿಸಿ, ಮೂಲಭೂತ ಸೌಕರ್ಯಗಳ ಕುರಿತು ಆಸಕ್ತಿ ತೋರಿಸಿ ಸಾಧಕರಾಗಿ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ವೇದಿಕೆಯು ಸಹಕರಿಸಲಿದೆ ಎಂದು ತಿಳಿಸಿದರು.

ಲಾಕ್ಡೌನ್ ಅವಧಿಯಲ್ಲಿ ವ್ಯಸನಿಗಳ ಚಿಕಿತ್ಸೆ ಮತ್ತು ಸಲಹೆಗಾಗಿ ವೇದಿಕೆಯ ಮೂಲಕ ಕೈಗೊಳ್ಳಲಾದ ಕ್ರಮಗಳಿಂದಾಗಿ ಸಾವಿರಾರು ಕುಟುಂಬಗಳು ವ್ಯಸನದಿಂದ ಹೊರಬರಲು ಸಾಧ್ಯವಾಗಿದೆ. ಮುಂದಕ್ಕೂ ಈ ನಿಟ್ಟಿನಲ್ಲಿ ವೇದಿಕೆಯಿಂದ ಯೋಜನೆಗಳನ್ನು ಹಾಕಿಕೊಂಡು ವ್ಯಸನಮುಕ್ತರ ನೆರವಿಗೆ ಸಹಕರಿಸಲಾಗುವುದು ಎಂದು ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಯ್ಸ್ ತಿಳಿಸಿದರು.

ಮದ್ಯದಂಗಡಿಗಳ ತೆರವಿನಿಂದ ಸಮಾಜದ ನಮ್ಮದಿಯನ್ನು ಕಸಿದುಕೊಂಡಿದೆ

ಕೊರೊನಾ ವೈರಸ್ ತಡೆಗೆ 40 ದಿವಸಗಳ ಕಾಲ ರಾಜ್ಯಾದ್ಯಂತ ಮುಚ್ಚಲ್ಪಟ್ಟಿದ್ದ ಮದ್ಯದಂಗಡಿಗಳನ್ನು ಹಠಾತ್ತನೆ ತೆರೆಯುವ ಮೂಲಕ ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ನೆಲೆಸಿರುವ ಶಾಂತಿ, ಸಮಾಧಾನ, ಸಂತೋಷ, ನೆಮ್ಮದಿಯನ್ನು ಕಸಿದುಕೊಂಡಂತಾಗಿದೆ. ನಿತ್ಯ ಮದ್ಯ ಸೇವನೆ ಮಾಡುತ್ತಿದ್ದ ಹಲವಾರು ವ್ಯಸನಿಗಳು ಲಾಕ್ ಡೌನ್ ಅವಧಿಯಲ್ಲಿ ಅನಿವಾರ್ಯವಾಗಿ ಮದ್ಯದಿಂದ ದೂರ ಉಳಿದು ಆರೋಗ್ಯ ಮತ್ತು ಕೌಟುಂಬಿಕ ಸಾಮರಸ್ಯದೊಂದಿಗೆ ಬದುಕುವ ಸಂಕಲ್ಪ ಮಾಡುವ ಸಮಯದಲ್ಲಿಯೇ ಮದ್ಯದಂಗಡಿ ತೆರೆದಿರುವುದು ವಿಷಾದನೀಯವಾಗಿದೆ. ರಾಜ್ಯದಲ್ಲಿ ಕೊರೊನಾ ಭೀತಿ ಆವರಿಸಿಕೊಂಡಿರುವಾಗಲೇ ಕುಟುಂಬಗಳಲ್ಲಿ ಮದ್ಯಪಾನದ ಭೀತಿಯನ್ನೂ ಹುಟ್ಟಿಸಲು ಕಾರಣವಾಗುವ ಈ ನಿರ್ಧಾರದ ಕುರಿತಂತೆ ಮಠಾಧಿಪತಿಗಳು, ಸಮಾಜಪರ ಚಿಂತಕರು ಆಕ್ಷೇಪ ವ್ಯಕ್ತಪಡಿಸಿದಾಗಲೂ ಸರಕಾರ ಕಿವಿಗೊಡದೆ ತಪ್ಪು ನಿರ್ಧಾರ ಕೈಗೊಂಡಿದೆ ಎಂಬುದು ಬಹುತೇಕ ಜನರ ಅಭಿಪ್ರಾಯವಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ ಹೇಳಿದರು.

- Advertisement -
spot_img

Latest News

error: Content is protected !!