Friday, May 17, 2024
Homeಕರಾವಳಿಕೊಟ್ಟಿಗೆಹಾರ: ಎಣ್ಣೆ ಏಟಿಗೆ ಮಾಲೀಕನ ಟಿಪ್ಪರ್ ಎಗರಿಸಿದ ಭೂಪ !

ಕೊಟ್ಟಿಗೆಹಾರ: ಎಣ್ಣೆ ಏಟಿಗೆ ಮಾಲೀಕನ ಟಿಪ್ಪರ್ ಎಗರಿಸಿದ ಭೂಪ !

spot_img
- Advertisement -
- Advertisement -

ಚಿಕ್ಕಮಗಳೂರು: ಸಂಸಾರ ನಿಭಾಯಿಸಲು ಹಣ ಬೇಕು. ನಿಮ್ಮ ಕಾಲಿಗೆ ಬೀಳ್ತೀನಿ ಎಂದು ಮಾಲೀಕನ ಬಳಿ ಅತ್ತು ಗೋಗರೆದರೂ ಮಾಲೀಕ ಹಣ ಕೊಡಲಿಲ್ಲ ಎಂದು ಹೇಳದೆ-ಕೇಳದೆ ಎಣ್ಣೆ ಏಟಲ್ಲಿ 14 ಚಕ್ರದ ಟಿಪ್ಪರ್ ಲಾರಿಯನ್ನ ತೆಗೆದುಕೊಂಡು ಊರಿಗೆ ಹೋಗಲು ಯತ್ನಿಸಿದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

ಮಂಗಳೂರು ಮೂಲದ ರಂಗಪ್ಪ ಎಂಬವನು ಕಡೂರು ತಾಲೂಕಿನಲ್ಲಿ ಪ್ರಭಾಕರ್ ಎಂಬವರ ಬಳಿ ಕೆಲಸ ಮಾಡುತ್ತಿದ್ದ. ಕೊರೊನಾ ವೈರಸ್ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದಮೇಲೆ ಡ್ರೈವರ್ ರಂಗಪ್ಪ ಒಂದೂವರೆ ತಿಂಗಳು ಊರಿಗೆ ಹೋಗಿಲ್ಲ. ಹೀಗಾಗಿ ಮಾಲೀಕನಿಗೆ ಹೆಂಡತಿ-ಮಕ್ಕಳಿಗೆ ಜೀವನಕ್ಕೆ ದುಡ್ಡು ಬೇಕು, ನಿಮ್ಮ ಕಾಲಿಗೆ ಬೀಳ್ತೀನಿ ಎಂದು ಕೇಳಿಕೊಂಡಿದ್ದರೂ ಮಾಲೀಕ ಹಣ ಹಾಕಿರಲಿಲ್ಲ. ಇದರಿಂದಾಗಿ ಎಣ್ಣೆ ಮತ್ತಲ್ಲಿದ್ದ ರಂಗಪ್ಪ ಟಿಪ್ಪರ್ ನಲ್ಲಿ ಅರ್ಧ ಟ್ಯಾಂಕರ್ ಡಿಸೇಲ್ ಇದ್ದರಿಂದ ಊರಿಗೆ ಮುಟ್ತಿನಿ ಎನ್ನುವ ನಂಬಿಕೆ ಬಂದಿತ್ತು. ಆದರೆ ಮಾಲೀಕನಿಗೆ ಹೇಳದೆ ಲಾರಿ ತಂದು ಕೊಟ್ಟಿಗೆಹಾರ ಚೆಕ್‍ ಪೋಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾನೆ.

ಮದ್ಯದ ಮತ್ತಿನಲ್ಲಿದ್ದ ರಂಗಪ್ಪ, “ಊಟಕ್ಕೆ ದುಡ್ ಇರಲಿಲ್ಲ, ಊಟವೂ ಇಲ್ಲ. ಹಣ ಯಾರ್ ಕೊಡ್ತಾರೆ. ಒಂದು ಹೊಟೇಲ್ ಇಲ್ಲ. ಅದಕ್ಕೆ ಲಾರಿಯಲ್ಲಿ ಡಿಸೇಲ್ ಇತ್ತು ಕೀ ನನ್ನ ಬಳಿಯೇ ಇತ್ತು. ಊರಿಗೆ ಹೊರಟಿದ್ದೇನೆ. ಬಿಟ್ಟರೇ ಊರಿಗೆ ಹೋಗ್ತೀನಿ. ಬಿಡಲಿಲ್ಲ ಅಂದ್ರೆ ಲಾರಿಯನ್ನ ಇಲ್ಲೇ ನಿಲ್ಲಿಸ್ತೀನಿ. ಸಾಕು ನನಗೆ ಊಟ ಕೊಡಿ” ಎಂದು ಪೊಲೀಸರಿಗೆ ಕೇಳಿದ್ದಾನೆ. ಸ್ಥಳೀಯರು ಕೇಳಿದ ಪ್ರಶ್ನೆಗೆಲ್ಲಾ ಹರಳು ಹುರಿದಂತೆ ಉತ್ತರಿಸಿದ ರಂಗಪ್ಪ, “ರೆಕಾರ್ಡ್ ಮಾಡ್ಕಳಿ, ನಿನ್ನೆಯಿಂದ ಟೈಟಾಗಿದ್ದೀನಿ, ಇವತ್ತು ಎರಡು ಕ್ವಾಟ್ರು ಕುಡಿದಿದ್ದೀನೆ. ಹೆಂಡತಿ-ಮಕ್ಕಳ ನೋಡ್ಬೇಕು ಹೋಗ್ತೀನಿ” ಎಂದಿದ್ದಾನೆ.

- Advertisement -
spot_img

Latest News

error: Content is protected !!