Wednesday, June 3, 2026
Homeತಾಜಾ ಸುದ್ದಿಬೆಂಗಳೂರಿನಲ್ಲಿ ಬಂಧಿಸಲ್ಪಟ್ಟವರು ಭಯೋತ್ಪಾದಕರು ಅಲ್ಲ ಎಂದರೆ ಅವರು ಸರ್ಕಾರದ ಮೊಮ್ಮಕ್ಕಳಾ?:ರಾಜ್ಯ ಸರ್ಕಾರಕ್ಕೆ ಎಂಎಲ್ಸಿ ಕೋಟ ಶ್ರೀನಿವಾಸ...

ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟವರು ಭಯೋತ್ಪಾದಕರು ಅಲ್ಲ ಎಂದರೆ ಅವರು ಸರ್ಕಾರದ ಮೊಮ್ಮಕ್ಕಳಾ?:ರಾಜ್ಯ ಸರ್ಕಾರಕ್ಕೆ ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ

- Advertisement -
- Advertisement -

ಬೆಂಗಳೂರು: ಬೆಂಗಳೂರಿನಲ್ಲಿ ಬಂಧನ ಆಗಿರುವ ಭಯೋತ್ಪಾದಕರು ಅವರು ಭಯೋತ್ಪಾದಕರು ಅಲ್ಲ ಅಂತಾದರೆ ಅವರು ರಾಜ್ಯ ಸರ್ಕಾರದ ಮೊಮ್ಮಕ್ಕಳಾ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಅವರು ಭಯೋತ್ಪಾದಕರು ಎಂದು ಈಗಲೇ ಹೇಳಲು ಆಗಲ್ಲ ಎಂಬ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ಆತಂಕಾರಿ ಎಂದು ಹೇಳಿದ್ದಾರೆ.

ಅವರು ಭಯೋತ್ಪಾದಕರು ಅನ್ನುವುದಕ್ಕೆ ಅನೇಕ ದಾಖಲೆ ಸಿಕ್ಕಿದೆ, ಇನ್ನಾದರೂ ರಾಜ್ಯ ಸರ್ಕಾರ ದಾಕ್ಷಿಣ್ಯ ಬಿಟ್ಟು ಕ್ರಮಕ್ಕೆ ಮುಂದಾಗಬೇಕು, ಇಲ್ಲವಾದರೆ ಬಿಜೆಪಿ ಹೋರಾಟ ಮಾಡಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ

- Advertisement -

Latest News

error: Content is protected !!