Thursday, July 16, 2026
Homeತಾಜಾ ಸುದ್ದಿ2028ಕ್ಕೂ ನಾನೇ ಗೆದ್ದು ಬರುತ್ತೇನೆ!:ವಿಧಾನಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ

2028ಕ್ಕೂ ನಾನೇ ಗೆದ್ದು ಬರುತ್ತೇನೆ!:ವಿಧಾನಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ

- Advertisement -
- Advertisement -

ಬೆಂಗಳೂರು: 2028ಕ್ಕೂ ನಾನೇ ಗೆದ್ದು ಬರುತ್ತೇನೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಪಾಲ್ಗೊಂಡಿದ್ದ ವೇಳೆ ಬೇಗ ಚರ್ಚೆ ಮುಗಿಸಿ ಎಂದು ವೇದವ್ಯಾಸ ಕಾಮತ್ ಗೆ ಸ್ಪೀಕರ್ ಯು.ಟಿ. ಖಾದರ್ ಸೂಚಿಸಿದರು.

ಆಗ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಗೆ ಹೆಚ್ಚು ಸಮಯ ಕೊಟ್ಟಿದ್ದೀರಿ, ನನಗೂ ಕೊಡಿ ಎಂದು ವೇದವ್ಯಾಸ ಕಾಮತ್ ಹೇಳಿದಾಗ, ನಾರಾಯಣಸ್ವಾಮಿ ಮೂರನೇ ಬಾರಿಗೆ ಶಾಸಕ, ನೀವು ಎರಡನೇ ಬಾರಿಗೆ ಶಾಸಕ ಎಂದು ವೇದವ್ಯಾಸ ಕಾಮತ್ ಗೆ ಸ್ಪೀಕರ್ ಹೇಳಿದರು. ಆಗ 2028 ಕ್ಕೆ ಕೂಡಾ ನಾನೇ ಗೆದ್ದು ಬರುತ್ತೇನೆ ಎಂದು ವೇದವ್ಯಾಸ ಕಾಮತ್ ಹೇಳಿದರು.

ಇನ್ನು ಬಜೆಟ್ ಮೇಲಿನ ಚರ್ಚೆ ವೇಳೆ ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ವೇದವ್ಯಾಸ ಕಾಮತ್ ಹೇಳುತ್ತಾ ಹೋದಾಗ ಆಡಳಿತ ಪಕ್ಷದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿ ಸದನದಲ್ಲಿ ಕೆಲವು ಹೊತ್ತು ತೀವ್ರ ಗದ್ದಲ ಉಂಟಾಗಿತ್ತು.

- Advertisement -

Latest News

error: Content is protected !!