Wednesday, June 3, 2026
Homeಕರಾವಳಿಹಿಂದುಳಿದ ವರ್ಗದ ಶಾಸಕ ಎಂದು ದ.ಕ.‌ ಡಿಸಿಯಿಂದ ಅವಮಾನ: ಮುಲ್ಲೈ ಮುಗಿಲನ್ ವಿರುದ್ಧ ಮೂಡಬಿದಿರೆ ಶಾಸಕ...

ಹಿಂದುಳಿದ ವರ್ಗದ ಶಾಸಕ ಎಂದು ದ.ಕ.‌ ಡಿಸಿಯಿಂದ ಅವಮಾನ: ಮುಲ್ಲೈ ಮುಗಿಲನ್ ವಿರುದ್ಧ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಆರೋಪ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿರುದ್ಧ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸಿಟ್ಟಿಗೆದ್ದಿದ್ದಾರೆ.

ಪಿಲಿಕುಳ ಸರ್ಕಾರಿ ಕಂಬಳ ಆಯೋಜನೆ ವಿಚಾರದಲ್ಲಿ ಸ್ಥಳೀಯ ಶಾಸಕನಾಗಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಉಮಾನಾಥ ಕೋಟ್ಯಾನ್ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಹರಿಹಾಯ್ದಿದ್ದಾರೆ.

ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಶಾಸಕ ಉಮಾನಾಥ ಕೋಟ್ಯಾನ್,
ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ನನಗೆ ಮಾಹಿತಿ ನೀಡಿಲ್ಲ, ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ನಡೆದಾಗಲೂ ನನ್ನ ಗಮನಕ್ಕೆ ತರಲಿಲ್ಲ ಎಂದು ಆರೋಪಿಸಿದ್ದಾರೆ.

ಸೆಪ್ಟೆಂಬರ್ 4 ರಂದು ನಡೆದ ಕಂಬಳ ಸಮಿತಿ ಸಭೆಯ ಮಾಹಿತಿಯನ್ನೇ ನೀಡಿರಲಿಲ್ಲ ಎಂದು ಹೇಳಿರುವ ಶಾಸಕ ಕೋಟ್ಯಾನ್, ಹಿಂದುಳಿದ ವರ್ಗದ ಶಾಸಕ ಎಂದು ಜಿಲ್ಲಾಧಿಕಾರಿ ನನ್ನನ್ನು ತಿರಸ್ಕಾರ ಮತ್ತು ಅವಮಾನ ಮಾಡುತ್ತಿದ್ದಾರೆ ಎಂದು ಬಹಿರಂಗ ಆರೋಪ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪ್ರತಿ ಹಂತ ಹಂತದಲ್ಲಿ ನನಗೆ ಅವಮಾನ ಮಾಡುತ್ತಾರೆ ಎಂದು ಹೇಳಿರುವ ಉಮಾನಾಥ ಕೋಟ್ಯಾನ್, ಡಿಸಿ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ಜಿಲ್ಲಾಧಿಕಾರಿಗೆ ರಾಜಕೀಯ ಮಾಡಲು ಇಚ್ಛೆ ಇದ್ದರೆ ರಾಜೀನಾಮೆ ನೀಡಿ ಪಕ್ಷಕ್ಕೆ ಸೇರಲಿ ಎಂದು ಹೇಳಿರುವ ಶಾಸಕರು, ಈ ಡಿಸಿ ಕಲಿತು ಬಂದಿದ್ದಾನಾ ಕಲಿಯದೇ ಬಂದಿದ್ದಾನಾ ಗೊತ್ತಿಲ್ಲ, ಹಿಂದಿನ ಡಿಸಿಯಾಗಿದ್ದ ಶಶಿಕಾಂತ್ ಸೆಂಥಿಲ್ ರಂತೆ ರಾಜೀನಾಮೆ ನೀಡಿ ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ನಾನು ಡಿಸಿ ವಿರುದ್ಧ ಹಕ್ಕು ಚ್ಯುತಿ ಮಂಡಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿರುವ ಶಾಸಕ ಉಮಾನಾಥ ಕೋಟ್ಯಾನ್, ವಿಧಾನಸಭೆ ಸ್ಪೀಕರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಈ ಬಗ್ಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!