- Advertisement -
- Advertisement -
ಶಿಮ್ಲಾ: ಇಲ್ಲಿನ ‘ಅಟಲ್ ಟನಲ್’ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತ್ತು ಇತರ ಗಣ್ಯರ ಜೊತೆಗೆ ಭಾಗವಹಿಸಿದ್ದ ಬಿಜೆಪಿ ಶಾಸಕರೊಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಕುಲ್ಲು ಜಿಲ್ಲೆಯ ಬಂಜಾರ ಕ್ಷೇತ್ರದ ಶಾಸಕ ಸುರೇಂದ್ರ ಶೌರಿ ಅವರಿಗೆ ವೈರಸ್ ತಗುಲಿದೆ.
ಅವರು ಅಕ್ಟೋಬರ್ 1 ರಂದು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಅ.2 ರ ಸಂಜೆಯೇ ಇವರ ವರದಿ ಪಾಸಿಟಿವ್ ಬಂದಿದೆ. ಆದರೂ ಕೂಡ ಅ.3 ರಂದು ಸುರಂಗಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
- Advertisement -