Sunday, June 7, 2026
Homeಕರಾವಳಿಬಂಟ್ವಾಳ: ಯುವಶಕ್ತಿ ಕಡೇಶಿವಾಲಯ ಹಾಗೂ ಕ್ರೀಡಾಪಟು ಜಯಲಕ್ಷ್ಮಿಗೆ ರಾಜ್ಯೋತ್ಸವ ಪ್ರಶಸ್ತಿ; ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್...

ಬಂಟ್ವಾಳ: ಯುವಶಕ್ತಿ ಕಡೇಶಿವಾಲಯ ಹಾಗೂ ಕ್ರೀಡಾಪಟು ಜಯಲಕ್ಷ್ಮಿಗೆ ರಾಜ್ಯೋತ್ಸವ ಪ್ರಶಸ್ತಿ; ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಭಿನಂದನೆ!

- Advertisement -
- Advertisement -

ಬಂಟ್ವಾಳ: ತಾಲೂಕಿನ ಕಡೇಶಿವಾಲಯ ಎಂಬ ಚಿಕ್ಕ ಊರಿನಿಂದ ಆರಂಭಗೊಂಡ ಸಂಸ್ಥೆ ಯುವಶಕ್ತಿ ಕಡೇಶಿವಾಲಯ. ತನ್ನೂರಿನ ಕಷ್ಟಗಳಿಗೆ ಸ್ಪಂದಿಸುವ ಜೊತೆಗೆ ಪರವೂರಿನ ನೋವುಗಳಿಗೂ ಮರುಗಿ ಸಹಾಯಹಸ್ತ ಚಾಚುತ್ತಾ, ಹತ್ತಾರು ಸೇವಾಯೋಜನೆಗಳ ಜೊತೆಗೆ ಹಲವಾರು ಧಾರ್ಮಿಕ ಕಾರ್ಯಗಳು, ಸದಾ ಸಾಮಾಜಿಕ ಚಟುವಟಿಕೆಗಳಿಂದ ಪಾದರಸದಂತಿರುವ ಹಾಗೂ ರಕ್ತನಿಧಿ ಮೂಲಕ ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗುತ್ತಿದ್ದ ಸಂಸ್ಠೆಗೆ ಇದೀಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಈ ಪ್ರಶಸ್ತಿಯು ಯುವಶಕ್ತಿ ಪಾಲಿಗೆ ಅರ್ಹವಾಗಿ ಒಲಿದು ಬಂದಿದ್ದು ಮತ್ತು ಕಡೇಶಿವಾಲಯ ಗ್ರಾಮದ ಕ್ರೀಡಾ ಕ್ಷೇತ್ರದ ಮಿನುಗು ತಾರೆ ಕುಮಾರಿ ಜಯಲಕ್ಷ್ಮಿ ಜಿ. ಇವರಿಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶ್ರೀ ಕ್ಷೇತ್ರ ಪೊಳಲಿಯಲ್ಲಿಂದು ಅಭಿನಂದಿಸಿ ಶುಭ ಹಾರೈಸಿದರು.

- Advertisement -

Latest News

error: Content is protected !!