Sunday, June 7, 2026
Homeಕರಾವಳಿಮಂಗಳೂರು: ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ; ಮಂಗಳೂರು‌ ಪೊಲೀಸ್ ಕಮಿಷನರ್ ಶಶಿಕುಮಾರ್...

ಮಂಗಳೂರು: ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ; ಮಂಗಳೂರು‌ ಪೊಲೀಸ್ ಕಮಿಷನರ್ ಶಶಿಕುಮಾರ್ ರಿಂದ ಟ್ವಿಟ್ಟರ್‌ ಅಭಿಯಾನ!

- Advertisement -
- Advertisement -

ಮಂಗಳೂರು: ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿಗೆ ಮಂಗಳೂರು‌ ಪೊಲೀಸ್ ಕಮಿಷನರ್ ಶಶಿಕುಮಾರ್ ಟ್ವಿಟ್ಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಸದ್ಯ ಮಂಗಳೂರು ಕಮಿಷನರ್ ಶಶಿಕುಮಾರ್ ಟ್ವಿಟ್ಟರ್‌ನಲ್ಲಿ ಅಭಿಯಾನ ಶುರು ಮಾಡುತ್ತಿದ್ದಂತೆ, ಟ್ವಿಟರ್ ನಲ್ಲಿ #PadmashreeForAppu ಅಭಿಯಾನ ಜೊರಾಗಿ ಸೌಂಡ್ ಮಾಡುತ್ತಿದ್ದು, ಅಭಿಯಾನವನ್ನು ಬೆಂಬಲಿಸಿ ಹಲವರಿಂದ ರೀ ಟ್ವೀಟ್ ಆಗಿ ಬೆಂಬಲ ಸಿಕ್ಕಿದೆ.

ಕರ್ನಾಟಕದ ಆಸ್ತಿ ಕನ್ನಡಿಗರ ಮನೆ ಮಗ ಅಪ್ಪುಗೆ ಪದ್ಮಶ್ರೀ ಸಿಗಬೇಕು. ಅಪ್ಪು ಸ್ಪೂರ್ತಿಯ ಚಿಲುಮೆ. ದೊಡ್ಮನೆ ಅಷ್ಟೇ ಅಲ್ಲ ಇಡೀ ಕರ್ನಾಟಕ ಆಪ್ತಬಂಧುವನ್ನು ಕಳೆದುಕೊಂಡಿದೆ ಎಂದು ಬರೆದುಕೊಂಡಿದ್ದಾರೆ. ನಾಗರಿಕ ಸೇವೆಗಳ ಹಿನ್ನೆಲೆಯಲ್ಲಿ ಕೊಡಮಾಡುವ ಪದ್ಮ ಅವಾರ್ಡ್ಸ್ಗೆ ಅವರು ಅರ್ಹರು. ಪುನೀತ್ ರಾಜ್ ಕುಮಾರ್ ಕೂಡ ಸಾಕಷ್ಟು ನಾಗರಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದಿದ್ದಾರೆ.

ಇಡೀ ಕುಟುಂಬ ನೋಡಬಹುದಾದಂತಹ ಚಿತ್ರಗಳನ್ನೇ ಮಾಡಿದ್ದರು. ಇನ್ನು ಕೌಟುಂಬಿಕ ಚಿತ್ರಗಳನ್ನು ನೋಡುವುದು ಹೇಗೆ? ಪದ್ಮಶ್ರೀ ಅವರ್ಡ್ ನೀಡುವುದರ ಮೂಲಕ ಗೌರವ ಸಿಗಬೇಕು ಎಂಬುದು ಕನ್ನಡಿಗರ ಆಸೆ.

- Advertisement -

Latest News

error: Content is protected !!