Monday, June 8, 2026
Homeಅಪರಾಧಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಕೈಚಳಕ ತೋರಿಸಿದ ಕಳ್ಳ; 12 ಲಕ್ಷ ರೂ.ಮೌಲ್ಯದ ಚಿನ್ನಾಭರಣ...

ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಕೈಚಳಕ ತೋರಿಸಿದ ಕಳ್ಳ; 12 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು!

- Advertisement -
- Advertisement -

ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಲಕ್ಷಾಂತರ ರೂ. ಮೌಲ್ಯದ ಒಡವೆಗಳನ್ನು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಎಂಬಲ್ಲಿ ನಡೆದಿದೆ.

ಇಂದಬೆಟ್ಟು ಗ್ರಾಮದ ಮಹಮ್ಮದ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಆದಿತ್ಯವಾರದಂದು ಮಹಮ್ಮದ್ ರವರ ಹೆಂಡತಿ ತನ್ನ ತಮ್ಮನಾದ ಸಪ್ವಾನ್ ಎಂಬಾತನ ಮದುವೆ ನಿಶ್ಚಿತಾರ್ಥದ ಬಗ್ಗೆ ಬಂಟ್ವಾಳ ತಾಲೂಕಿನ ಉಳಿ ಗ್ರಾಮಕ್ಕೆ ತೆರಳಿದ್ದು, ಮನೆಯಲ್ಲಿ ಒಬ್ಬರೇ ಇದ್ದ ಮಹಮ್ಮದ್ ಚಹಾ ತಿಂಡಿ ಮಾಡಿ, ಅಲ್ಲೆ ಮನೆಯ ಹತ್ತಿರದ ಅಡಿಕೆ ತೋಟದಲ್ಲಿ ಹುಲ್ಲು ತೆಗೆಯುವ ಕೆಲಸಕ್ಕೆ ಹೋಗಿದ್ದಾರೆ. ಸಂಜೆ ಆತನ ಹೆಂಡತಿ ವಾಪಾಸ್ಸು ಮನೆಗೆ ಬರುತ್ತಿದ್ದಂತೆ ಗಾಡ್ರೇಜ್‌ ನಲ್ಲಿದ್ದ ಮೊಬೈಲ್ ಅಲ್ಲೇ ಪಕ್ಕದ ಚೇರ್ ಮೇಲೆ ಇರುವುದನ್ನು ಗಮನಿಸಿ ಗಾಬರಿಯಿಂದ ಕಳವು ಆಗಿರಬಹುದೆಂದು ಮಹಮ್ಮದ್ ರವರನ್ನು ಕರೆದಿದ್ದಾರೆ.

ಒಳಗೆ ಹೋಗಿ ನೋಡಿದಾಗ ಗಾಡ್ರೇಜ್‌ ನ ಬಾಗಿಲು ಸ್ವಲ್ಪವಾಗೆ ತೆರೆದಿತ್ತು, ಅನುಮಾನಗೊಂಡು ನೋಡಿದಾಗ ಗಾಡ್ರೇಜ್‌ ನ ಒಂದು ಲಾಕರ್ ನಲ್ಲಿ ಇರಿಸಿದ್ದ ಸಣ್ಣ ಸ್ಟೀಲ್ ಬೋಗಣಿಯ ಹತ್ತಿರದಲ್ಲಿದ್ದ ವ್ಯಾನಿಟಿ ಬ್ಯಾಗ್‌ ನಲ್ಲಿದ್ದ 5,200 ರೂ ನಗದು ಮತ್ತು ಒಂದು 13 ಪವನ್ ನೆಕ್ಲೇಸ್,ಒಂದು ಎಚ್ ಆಕಾರದ ಪೆಂಡೆಂಟ್ ಇರುವ ಒಂದು ಪವನಿನ ಚೈನ್, ಒಂದು ಇಸ್ಪೀಟ್ ಆಕಾರದ ಪೆಂಡೆಂಟ್ ಮತ್ತು ಗುಂಡು ಇರುವ 01 ಪವನ್ ನ ಸಣ್ಣ ಚೈನ್, ಮೆಂತೆ ಆಕಾರದ ಡಿಸೈನ್ ಇರುವ 1 ½ ಪವನ್ ನ ಮಕ್ಕಳ ಚೈನ್ ಎರಡು, ನಾಲ್ಕು ಪವನಿನ ನಾಲ್ಕು ಕಾಯಿನ್ಸ್, ಚಿನ್ನದ ಬಿಸ್ಕೆಟ್ 16 ಪವನ್ ,ಚಿನ್ನದ ಗಟ್ಟಿ 02 ಪವನ್ , ಬ್ರಾಸ್ ಲೈಟ್ ½ ಪವನ್, ತುಂಡಾದ ಬಳೆ ಮತ್ತು ಪೆಂಡೆಂಟ್ 1 ½ ಪವನ್ , ಮಗುವಿನ ಕಿವಿ ಓಲೆ 1 ಜೊತೆ ½ ಪವನ್ , ಹೀಗೆ ಸುಮಾರು 12,05,200 ಮೌಲ್ಯದ ವಿವಿಧ ರೀತಿಯ 40 ಪವನ್ ಚಿನ್ನಾಭರಣಗಳು ಕಳವಾಗಿದೆ.

ಸದ್ಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!