Friday, May 17, 2024
Homeಕರಾವಳಿಬಂಟ್ವಾಳ: ವಿಟ್ಲಪಡ್ನೂರು ಗ್ರಾ.ಪಂ.ಯಲ್ಲಿ ಸುಮಾರು 50 ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್...

ಬಂಟ್ವಾಳ: ವಿಟ್ಲಪಡ್ನೂರು ಗ್ರಾ.ಪಂ.ಯಲ್ಲಿ ಸುಮಾರು 50 ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ

spot_img
- Advertisement -
- Advertisement -

ಬಂಟ್ವಾಳ: ವಿಟ್ಲಪಡ್ನೂರು ಗ್ರಾ.ಪಂ.ಯಲ್ಲಿ ಸುಮಾರು 50 ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಗ್ರಾಮದ ಅಭಿವೃದ್ಧಿಯೇ ನಮ್ಮ ಅಧಿಕಾರದ ಮೂಲಮಂತ್ರವಾಗಿದ್ದು , ಕೋವಿಡ್ ಸಂಕಷ್ಟದ ಮಧ್ಯೆಯೂ ನಾವು ಕೋಟ್ಯಾಂತರ ರೂ ಅನುದಾನದ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದೇವೆ ಎಂದು ಹೇಳಿದರು.

  ಜಾತಿ, ಮತ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ಸರಕಾರ ಅನೇಕ ಜನಪರ ಯೋಜನೆಗಳನ್ನು ನೀಡಿದೆ.    ಸಾಮಾನ್ಯ ಜನರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಗ್ರಾ.ಪಂ.ಸದಸ್ಯರು ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು.   14 ಕೋಟಿ ಅನುದಾನವನ್ನು ವಿಟ್ಲ ಪಡ್ನೂರು ಗ್ರಾ.ಪಂ.ಗೆ ಒದಗಿಸಿದ್ದು, ಇನ್ನೂ ಕೋಟ್ಯಾಂತರ ರೂ ಅನುದಾನದ ಮೂಲಕ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ.   ಹಳ್ಳಿ ಹಳ್ಳಿಗಳಲ್ಲಿ ಚೆಕ್ ಡ್ಯಾಂ ಗಳ ಮೂಲಕ ಗ್ರಾಮದಲ್ಲಿ ಕೃಷಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಸರಕಾರ ಅನುದಾನ ಒದಗಿಸಿದ್ದು, ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು.

ಕೃಷಿ ಸಮ್ಮಾನ್ ಯೋಜನೆ ಮೂಲಕ ಗ್ರಾಮೀಣ ಭಾಗದ ಕೃಷಿಕರ ಖಾತೆಗೆ ಕೋಟ್ಯಾಂತರ ರೂ  ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು ಮುಂದಿನದಿನಗಳಲ್ಲಿ ಅಭಿವೃದ್ಧಿಗೆ ತಾಲೂಕಿನ ಜನರ ಸಹಕಾರ ಯಾಚಿಸಿದರು.

ವಿಟ್ನ ಪಡ್ನೂರು ಗ್ರಾಮಪಂಚಾಯತ್ ಅಧ್ಯಕ್ಷೆ ರೇಶ್ಮಾ ಶಂಕರಿ ಬಳಿಪಗುಳಿ ಅವರು ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಸಂದೇಶ್ ಶೆಟ್ಟಿ, ಪ್ರೇಮಲತಾ, ರವೀಶ್ ಶೆಟ್ಟಿ ಕರ್ಕಳ,ಜಯಂತ,  ಜಯಲಕ್ಮೀ,  ನೆಬೀಶಾ ಕೆ.ಎಚ್ , ಅವ್ವಮ್ಮ, ರೇಖಾ, ಜಯಭಾರತಿ, ಮೈಮುದ್, ಜಯಂತಿ , ಮಾಜಿ ತಾ.ಪಂ.ಸದಸ್ಯ ಮಾದವ ಮಾವೆ, ಗ್ರಾಮ ಕರಣೀಕೆ ವೈಶಾಲಿ, ಮೇಲ್ವಿಚಾರಕಿ ರೇಣುಕಾ, ಇಂಜಿನಿಯರ್ ನಾಗೇಶ್,ಗ್ರಾ.ಪಂ.ಕಾರ್ಯದರ್ಶಿ ಸುಜಾಯ ಕೆ , ಪ್ರಮುಖರಾದ ರಮನಾಥ ರಾಯಿ, ಅರವಿಂದ ರೈ, ನಾರಾಯಣ  ಭಟ್,  ವಿಶ್ವನಾಥ ಅಡಪ, ವಿಜಯ ಪಿ.ನಾಗೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.  ಗ್ರಾಮ ಪಂಚಾಯತ್ ಸದಸ್ಯ,  ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿದರು. ಪಿ.ಡಿ.ಒ.ಶ್ರೀಶೈಲಾ ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!