Sunday, June 7, 2026
Homeತಾಜಾ ಸುದ್ದಿಮಹಾಮಾರಿ ಕೊರೋನಾಗೆ ಬಿಜೆಪಿ ಶಾಸಕಿ ಬಲಿ!..

ಮಹಾಮಾರಿ ಕೊರೋನಾಗೆ ಬಿಜೆಪಿ ಶಾಸಕಿ ಬಲಿ!..

- Advertisement -
- Advertisement -

ರಾಜಸ್ಥಾನ: ಇಲ್ಲಿನ ರಾಜಸಮಂದ್ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರು ಗುರುಗ್ರಾಮ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಕಿರಣ್ ಮಹೇಶ್ವರಿ ಅವರಿಗೆ ಕಳೆದ ತಿಂಗಳು ಕೊರೋನಾ ಪಾಸಿಟಿವ್ ವರದಿ ಬಂದಿತ್ತು ಆ ನಂತರದಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ನವೆಂಬರ್ ಮೊದಲ ವಾರ ಅವರು ಗುರುಗ್ರಾಮ್ ನ ಮೇದಾಂತ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ ಕೊರೋನಾ ಅಬ್ಬರಕ್ಕೆ ಚಿಕೆತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.

ಕಿರಣ್ ಮಹೇಶ್ವರಿ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ರಾಜಸ್ಥಾನದ ಉದಯಪುರ ಕ್ಷೇತ್ರದಿಂದ 2006 ರಿಂದ 2009 ರವರೆಗೆ 14ನೇ ಲೋಕಸಭೆ ಸದಸ್ಯರಾಗಿದ್ದರು.

- Advertisement -

Latest News

error: Content is protected !!