Sunday, August 16, 2026
Homeಕರಾವಳಿಮಂಗಳೂರುಬಂಟ್ವಾಳ:ಮಾದಕವಸ್ತು ಸಾಗಾಟ ಜಾಲ ಪತ್ತೆ: ಓರ್ವ ಆರೋಪಿ ಬಂಧನ, 1.05 ಕೋಟಿ ರೂ. ಮೌಲ್ಯದ ಎಂಡಿಎಂಎ,...

ಬಂಟ್ವಾಳ:ಮಾದಕವಸ್ತು ಸಾಗಾಟ ಜಾಲ ಪತ್ತೆ: ಓರ್ವ ಆರೋಪಿ ಬಂಧನ, 1.05 ಕೋಟಿ ರೂ. ಮೌಲ್ಯದ ಎಂಡಿಎಂಎ, ಕೊಕೇನ್ ವಶ

- Advertisement -
- Advertisement -

ಬಂಟ್ವಾಳ: ಹಾಸನದಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಮಾದಕವಸ್ತು ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿ, ಅಂದಾಜು 1.05 ಕೋಟಿ ರೂಪಾಯಿ ಮೌಲ್ಯದ ಮಾದಕದ್ರವ್ಯ ಹಾಗೂ ಇತರ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಬಂಧಿತ ಆರೋಪಿ.

ಘಟನೆಯ ವಿವರ: ದಿನಾಂಕ 16.08.2026ರಂದು ತಡರಾತ್ರಿ ಹಾಸನ ಕಡೆಯಿಂದ ಮಂಗಳೂರಿಗೆ ಕಾರಿನಲ್ಲಿ ಮಾದಕವಸ್ತು ಸಾಗಾಟವಾಗುತ್ತಿರುವ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ಮಂಜುನಾಥ ಟಿ. ಅವರಿಗೆ ನಿಖರ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪಿಎಸ್ಐ ಹಾಗೂ ಸಿಬ್ಬಂದಿ ತಂಡವು KA-01-MA-1284 ನೋಂದಣಿ ಸಂಖ್ಯೆಯ ಕಾರನ್ನು ತಡೆದು ತಪಾಸಣೆ ನಡೆಸಿದೆ.

ವಿಚಾರಣೆ ವೇಳೆ ಕಾರು ಚಾಲಕ ಮಹಮ್ಮದ್ ಅಮೀರ್ ಜರ್ತಾಬ್, ತಾನು ಮಾದಕವಸ್ತು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಾರನ್ನು ಸಂಪೂರ್ಣ ತಪಾಸಣೆಗೊಳಪಡಿಸಿದಾಗ ಬೃಹತ್ ಪ್ರಮಾಣದ ಮಾದಕದ್ರವ್ಯಗಳು ಪತ್ತೆಯಾಗಿವೆ.

ವಶಪಡಿಸಿಕೊಂಡ ಸ್ವತ್ತುಗಳು:

  • MDMA (ಎಂಡಿಎಂಎ): 538.63 ಗ್ರಾಂ (ಅಂದಾಜು ಮೌಲ್ಯ: ₹53,86,300/-)
  • ಕೊಕೈನ್ (Cocaine): 99.12 ಗ್ರಾಂ (ಅಂದಾಜು ಮೌಲ್ಯ: ₹49,56,000/-)
  • ಇತರ ಸಾಮಗ್ರಿಗಳು: ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರು.
  • ಒಟ್ಟು ಜಪ್ತಿ ಮಾಡಿದ ಸ್ವತ್ತುಗಳ ಮೌಲ್ಯ: ₹1,05,59,450/- (ಒಂದು ಕೋಟಿ ಐದು ಲಕ್ಷದ ಐವತ್ತೊಂಬತ್ತು ಸಾವಿರದ ನಾಲ್ಕು ನೂರ ಐವತ್ತು ರೂಪಾಯಿ).

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 113/2026, ಕಲಂ: 8(C) r/w 22(C), 21(B) ಎನ್‌ಡಿಪಿಎಸ್‌ (NDPS) ಕಾಯ್ದೆ 1985 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಮುಂದುವರಿಸಿದ್ದಾರೆ.

- Advertisement -

Latest News

error: Content is protected !!