- Advertisement -
- Advertisement -
ಕಾರವಾರ: ಕುಮಟಾ ಶಾಸಕ ದಿನಕರ ಶೆಟ್ಟಿ ಕಾರು ಅಪಘಾತಾಗಿದೆ. ಶಾಸಕ ದಿನಕರ ಶೆಟ್ಟಿ ಕಾರಿಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಬಸ್ರಾಣಿಯ ನಾಗಪ್ಪ ಗೌಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಷ್ಟ್ರಿಯ ಹೆದ್ದಾರಿ 66 ಹೊನ್ನಾವರ ಕರ್ಕಿನಾಕ ಬಳಿ ಈ ಅಪಘಾತ ನಡೆದಿದೆ. ಶಾಸಕರು ತಮ್ಮ ಕಾರ್ ನಲ್ಲಿ ಗಾಯಾಳುವನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಗಾಯಾಳುವನ್ನು ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
- Advertisement -