Wednesday, June 24, 2026
Homeಕರಾವಳಿಮಂಗಳೂರುಮಂಗಳೂರು: ಕೋಳಿ‌ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ.? ; ಪೊಲೀಸರ ವಿರುದ್ಧ ಶಾಸಕ...

ಮಂಗಳೂರು: ಕೋಳಿ‌ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ.? ; ಪೊಲೀಸರ ವಿರುದ್ಧ ಶಾಸಕ ಅಶೋಕ್ ಕುಮಾರ್ ರೈ ಕಿಡಿ.

- Advertisement -
- Advertisement -

ಮಂಗಳೂರು: ಕೋಳಿ‌ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ.? ಎಂದು ಪೊಲೀಸರ ವಿರುದ್ಧ ಶಾಸಕ ಅಶೋಕ್ ಕುಮಾರ್ ರೈ ಕಿಡಿಕಾಡಿದ್ದಾರೆ.

ಕಡಬದಲ್ಲಿ ನಡೆದ ತುಳುಕೂಟ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಭಾಷಣದ ವೇಳೆ ಕೇಪುವಿನಲ್ಲಿ ನಡೆದ ಕೋಳಿ ಅಂಕದ ವೇಳೆ ಪೊಲೀಸರ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಕೋಳಿ‌ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ.? . ಪೊಲೀಸರು ಅಂದ್ರೆ ಎಲ್ಲ ಕಡೆ ಅವರದೇ ದರ್ಬಾರು ಅಂದ್ಕೊಂಡಿದ್ದಾರಾ.? .ಕೇಪುನಲ್ಲಿ ಜೂಜು ಏನೂ ನಡೆಯೋದಿಲ್ಲ, ಸಂಪ್ರದಾಯ ಆಚರಣೆಗೆ ಕೋಳಿ ಕಟ್ಟುತ್ತಾರೆ. ಕೋಳಿಯನ್ನು ಒಳ್ಳೆದಾಗಿ ಬೆಳೆಸಿ ಪದಾರ್ಥಕ್ಕೆ ಕೋಳಿ ಕಟ್ಟುವುದು ವಾಡಿಕೆ.ಅಲ್ಲಿಗೆ ಬಂದು ಪೊಲೀಸರು ಲಾಠಿ ಚಾರ್ಜ್ ಮಾಡ್ತೇವೆ ಅಂದ್ರೆ ಏನರ್ಥ.?  ಎಂದು ಪ್ರಶ್ನಿಸಿದ್ದಾರೆ.

ಇವರಿಗೆ ಯಾರದ್ದೂ ಹೆದರಿಕೆ ಇಲ್ಲ, ಕಳ್ಳರಿಗೆ..! .ಕೋಳಿ ಕಟ್ಟ ನೆಪದಲ್ಲಿ ಪೊಲೀಸರಿಗೆ ಕಳ್ಳರೆಂದು ಬೈಗುಳ.! .ನಿನ್ನೆ ಅಲ್ಲಿ ಸಂಜೆವರೆಗೆ ನಿಂತು ಕೋಳಿ ಕಟ್ಟ ಮಾಡಿಕೊಂಡು ಬಂದಿದ್ದೆ. ಕೋಳಿ ಅಂಕ ಅಧಿಕೃತ ಮಾಡುವುದಕ್ಕೇನು ತೊಂದ್ರೆ ಇಲ್ಲ.ಆದರೆ ಇಲ್ಲಿ ಹೆಂಗಸರು ನಮಗೆ ಬೈತಾರಲ್ವಾ..?  ಕೆಲವರು ಕೋಳಿ ಕಟ್ಟ ಎಂದು ಅವ್ರ ಬಂಗಾರ ಎತ್ತಿಕೊಂಡು ಹೋಗ್ತಾರೆ.ಹಾಗಾಗಿ ಕೋಳಿ ಕಟ್ಟದ ಪರವಾಗಿ ನಿಲ್ಲುವುದಕ್ಕೂ ಆಗುವುದಿಲ್ಲ ನಮ್ಗೆ. ಹಾಗೆ ನಿಂತರೆ ಮಹಿಳೆಯರು ಮುಂದೆ ನಮನ್ನೇ ಸೋಲಿಸಿಯಾರು ಎಂದಿದ್ದಾರೆ.

- Advertisement -

Latest News

error: Content is protected !!