ಬೆಳ್ತಂಗಡಿ: 2025 – 26ನೇ ಸಾಲಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಪ್ರವಾದಿಂದಾಗಿ ಹಾನಿಗೊಳಗಾಗುವ ಸಾರ್ವಜನಿಕ ಮೂಲಸೌಭ್ಯಗಳ ತುರ್ತು ದುರಸ್ತಿಗೆ ಅವಶ್ಯವಿರುವ ತಡೆಗೋಡೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುದಾನ ಒದಗಿಸುವಂತೆ ರಾಜ್ಯ ಕಂದಾಯ ಇಲಾಖೆಯ ಕಾರ್ಯದರ್ಶಿಗಳಾದ ಮೌನೀಶ್ ಮೌದ್ಧಿಗಲ್ ರವರನ್ನು ಬೆಳ್ತಂಗಡಿ ಶಾಸಕ ಶ್ರೀ ಹರೀಶ್ ಪೂಂಜ ಅವರು ಜು. 31 ರಂದು ಭೇಟಿಯಾದರು.
ಬೆಳ್ತಂಗಡಿ ತಾಲೂಕಿನಲ್ಲಿ ಸುರಿದ ವಿಪರೀತ ಮಳೆಯಿಂದ ಪ್ರವಾಹ ಸ್ಥಿತಿ ಏರ್ಪಟಿದ್ದು, ಗುಡ್ಡ ಜಾಗ ಕುಸಿದು ಸಾರ್ವಜನಿಕ ಸಂಪರ್ಕ ರಸ್ತೆಗಳು, ಸೇತುವೆಗಳು, ಕಾಲು ಸಂಕಗಳು, ವಿದ್ಯುತ್ ಸಂಪರ್ಕಗಳು, ಶಾಲಾ ಕಟ್ಟಡಗಳು, ಅಂಗನವಾಡಿಗಳು, ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳು ಮುಂತಾದವುಗಳ ಕಟ್ಟಡಗಳು/ಜಮೀನುಗಳು ತೀರಾ ಅಪಾಯದ ಮಟ್ಟದಲ್ಲಿದ್ದು ನೀರಿನ ಸೆಳೆತಕ್ಕೆ ಕೊಚ್ಚಿ/ಕುಸಿತಕ್ಕೊಳಗಾಗುವ ಸಾಧ್ಯತೆಯಿದ್ದು, ಅದಕ್ಕಾಗಿ ಆ ಭಾಗದಲ್ಲಿ ಅಗತ್ಯವಾಗಿ ಸಾರ್ವಜನಿಕ ಮೂಲಸೌಲಭ್ಯಗಳನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ ತಡೆಗೋಡೆ ಕಾಮಗಾರಿಗಳನ್ನು ಕೈಗೊಳ್ಳಲು ಅವಶ್ಯ ಅನುದಾನವನ್ನು ಶೀಘ್ರ ಒದಗಿಸುವಂತೆ ಮನವಿ ಸಲ್ಲಿಸಿ ವಿನಂತಿಸಿದರು.


