Thursday, June 4, 2026
Homeಕರಾವಳಿಕಡಬ: ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಸದಸ್ಯೆ ಕೊನೆಗೂ ಠಾಣೆಗೆ ಹಾಜರು

ಕಡಬ: ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಸದಸ್ಯೆ ಕೊನೆಗೂ ಠಾಣೆಗೆ ಹಾಜರು

- Advertisement -
- Advertisement -

ಕಡಬ: ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಸದಸ್ಯೆ ಭಾರತಿ ಮೂಕಮಲೆ ಕೊನೆಗೂ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ.

ಅಕ್ಟೋಬರ್ 29ರಂದು ಐನೆಕಿದು ಗ್ರಾಮದ ಮೂಕಮಲೆ ಮನೆಯ ಶಶಿಕಾಂತ್‌ ಎಂಬುವರ ಪತ್ನಿ ಭಾರತಿ ಮೂಕಮಲೆ (33) ಅವರು ಕಾಣೆಯಾಗಿರೋದಾಗಿ ದೂರು ದಾಖಲಾಗಿತ್ತು. ಆದ್ರೆ ನನ್ನನ್ನು ಯಾರು ಅಪಹರಿಸಿಲ್ಲ, ನಾನು ಪ್ರೀತಿಸಿದವರೊಂದಿಗೆ ಬಂದಿದ್ದೇನೆ ಎಂದು ಭಾರತೀ ವೀಡಿಯೋ ಮೂಲಕ ಹೇಳಿಕೊಂಡಿದ್ರು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರು ಭಾರತಿಯನ್ನು ಹುಡುಕುವ ಪ್ರಯತ್ನದಲ್ಲಿದ್ರು. ಈ ವೇಳೆ ಭಾರತಿ ವಕೀಲರೊಂದಿಗೆ ಸುಬ್ರಹ್ಮಣ್ಯ ಠಾಣೆಗೆ ಬಂದು ತಾನು ಪ್ರಿಯಕರನೊಂದಿಗೇ ಜೀವನ ನಡೆಸೋದಾಗಿ ಲಿಖಿತ ರೂಪದಲ್ಲಿ ಬರೆದುಕೊಟ್ಟು ಪ್ರಿಯಕರನೊಂದಿಗೆ ತೆರಳಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!