Thursday, June 4, 2026
Homeಕರಾವಳಿಉಪ್ಪಿನಂಗಡಿ:ಮೀನು ಹಿಡಿಯಲು ಹೋಗಿ  ನಾಪತ್ತೆ ಪ್ರಕರಣ; ನೀರುಪಾಲಾದ ವ್ಯಕ್ತಿಯ ಮೃತದೇಹ ಪತ್ತೆ

ಉಪ್ಪಿನಂಗಡಿ:ಮೀನು ಹಿಡಿಯಲು ಹೋಗಿ  ನಾಪತ್ತೆ ಪ್ರಕರಣ; ನೀರುಪಾಲಾದ ವ್ಯಕ್ತಿಯ ಮೃತದೇಹ ಪತ್ತೆ

- Advertisement -
- Advertisement -

ಪ್ಪಿನಂಗಡಿ: ಇಲ್ಲಿನ ಮೊಗೆರಡ್ಕದಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಮೊಗ್ರು ಗ್ರಾಮದ ದಂಡುಗ ನಿವಾಸಿ ಗುಮ್ಮಣ್ಣ ಗೌಡರ ಪುತ್ರ ಜನಾರ್ದನ ಗೌಡ (42) ಅವರ ಮೃತದೇಹ ಪತ್ತೆಯಾಗಿದೆ.

ನಿನ್ನೆ  ಜನಾರ್ದನ ಅವರು ತನ್ನ ಸ್ನೇಹಿತ ಮಹೇಶ್ ಜೊತೆ ನೇತ್ರಾವತಿ ನದಿಗೆ ಬಲೆ ಹಾಕಿ ಮೀನು ಹಿಡಿಯಲು ನೀರಿಗಿಳಿದಿದ್ದರು. ನೀರಿಗಿಳಿದ ಸ್ಥಳದಲ್ಲಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದ ಕೆಸರು ತುಂಬಿ ಅಪಾಯಕಾರಿಯಾಗಿತ್ತು. ಮೊದಲು ನೀರಿಗಿಳಿದಿದ್ದ ಜನಾರ್ದನ ಅವರು ನೀರಿನಲ್ಲಿ ಮುಳುಗಿ ನಾಪತ್ತೆಯಾದರೆಂದೂ ತಿಳಿದ ಮಹೇಶ್‌ ರಕ್ಷಣೆಗೆ ಸ್ಥಳೀಯರ ಸಹಕಾರ ಪಡೆಯದೆ ನೇರವಾಗಿ ಜನಾರ್ದನ್‌ ಅವರ ಮನೆಗೆ ಹೋಗಿ ಅವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದರು.

- Advertisement -

Latest News

error: Content is protected !!