Thursday, June 4, 2026
Homeಕರಾವಳಿಬೆಳ್ತಂಗಡಿ: ಉಜಿರೆಯ ರೆಂಜಾಳದ ಯುವತಿ ನಾಪತ್ತೆ ಪ್ರಕರಣ ಸುಖಾಂತ್ಯ

ಬೆಳ್ತಂಗಡಿ: ಉಜಿರೆಯ ರೆಂಜಾಳದ ಯುವತಿ ನಾಪತ್ತೆ ಪ್ರಕರಣ ಸುಖಾಂತ್ಯ

- Advertisement -
- Advertisement -

ಬೆಳ್ತಂಗಡಿ: ಉಜಿರೆಯ ರೆಂಜಾಳದಿಂದ ಉಡುಪಿ ಶೋರೂಂ ನಲ್ಲಿ‌ ಕೆಲಸ ಮಾಡುತ್ತಿದ್ದ ಯುವತಿ ದಿವ್ಯಶ್ರೀ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯವಾಗಿದೆ.

ಯುವತಿ ಸೋಮವಾರ ಸಂಜೆ ಮನೆಗೆ ವಾಪಸ್ ಬಂದಿದ್ದಾಳೆ. ಮನೆಯವರು ಯುವತಿಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದು ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ. ತನ್ನ ಮನೆಯ ವೈಯಕ್ತಿಕ ಕಾರಣಗಳಿಂದ ನೊಂದು ಉಡುಪಿಯ ಸಂಬಂಧಿಕರ ಮನೆಗೆ ಹೋಗಿದ್ದೆ ಎಂಬ ಮಾಹಿತಿಯನ್ನು ಯುವತಿ ನೀಡಿದ್ದಾಳೆ.

ದಿನಾಂಕ 11.04.2022 ರಂದು ಬೆಳಿಗ್ಗೆ 8.30 ಗಂಟೆಗೆ ಉಡುಪಿಗೆಂದು ಮನೆಯಿಂದ ಹೋದ ದಿವ್ಯಶ್ರೀ ಬಜಗೋಳಿಯ ಆಕೆಯ ಚಿಕ್ಕಮ್ಮ ಭಾರತಿರವರ ಮನೆಯಲ್ಲಿ 3-4 ದಿನ ಉಳಿದುಕೊಂಡಿದ್ದಳು.  ದಿನಾಂಕ 15.04.2022 ರಂದು ಬೆಳಿಗ್ಗೆ 7.30 ಗಂಟೆಗೆ ಬಜಗೋಳಿಯಿಂದ ಕುಂದಾಪುರಕ್ಕೆ ಹೋಗಿ ಬರುತ್ತೇನೆಂದು ಆಕೆಯ ಚಿಕ್ಕಮ್ಮನಲ್ಲಿ ಹೇಳಿ ಹೋದವಳು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಬಂದಿರಲಿಲ್ಲ. ಈ ಬಗ್ಗೆ ಮನೆಯವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಯುವತಿ ಮನೆಗೆ ವಾಪಸ್ಸಾಗಿದ್ದು ಪ್ರಕರಣ ಸುಖಾಂತ್ಯವಾಗಿದೆ.

- Advertisement -

Latest News

error: Content is protected !!