Thursday, June 4, 2026
Homeಕರಾವಳಿಮಂಗಳೂರುಚಿಕ್ಕಬಳ್ಳಾಪುರದ ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಮೃತದೇಹ ಧರ್ಮಸ್ಥಳದ ದೊಂಡೊಲೆಯಲ್ಲಿ ಪತ್ತೆ

ಚಿಕ್ಕಬಳ್ಳಾಪುರದ ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಮೃತದೇಹ ಧರ್ಮಸ್ಥಳದ ದೊಂಡೊಲೆಯಲ್ಲಿ ಪತ್ತೆ

- Advertisement -
- Advertisement -

ಧರ್ಮಸ್ಥಳ; ಚಿಕ್ಕಬಳ್ಳಾಪುರದ ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಮೃತದೇಹ ಧರ್ಮಸ್ಥಳದ ದೊಂಡೊಲೆಯಲ್ಲಿ ಪತ್ತೆಯಾಗಿದೆ.

ಅಕ್ಟೋಬರ್‌ 31 ರಂದು ಚಿಂತಾಮಣಿಯಿಂದ ಚಿಂತಾಮಣಿ ತಾಲೂಕಿನ ಮದ್ದಿರೆಡ್ಡಿ (61) ಈಶ್ವರಮ್ಮ (52) ದಂಪತಿ ಕಾಣೆಯಾಗಿದ್ದರು. ಅವರ ಮೃತದೇಹ  ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ದೊಂಡೊಲೆ ಪವರ್ ಪ್ರಾಜೆಕ್ಟ್ ಬಳಿ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ. ದಂಪತಿ ನಾಪತ್ತೆಯಾಗಿದ್ದು ಈ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಹುಡುಕಿಕೊಂಡು ಧರ್ಮಸ್ಥಳಕ್ಕೆ ಬಂದಿದ್ದಾರೆ. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯದಲ್ಲಿ‌‌ ಶೌರ್ಯ ತಂಡ ಹಾಗೂ ಪೊಲೀಸರ ಸಹಕಾರದಲ್ಲಿ ನೇತ್ರಾವತಿ ಸ್ನಾನಘಟ್ಟ ಸೇರಿದಂತೆ ನದಿಯಲ್ಲಿ ಹುಡುಕಾಡಿದ್ದಾರೆ.

ಈ ವೇಳೆ ದೊಂಡೋಲೆ ಬಳಿಯ ಪವರ್ ಪ್ರಾಜೆಕ್ಟ್ ಅಣೆಕಟ್ಟಿನಲ್ಲಿ ಶವಗಳು ಪತ್ತೆಯಾಗಿವೆ. ಕೂಡಲೇ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಉಜಿರೆ, ವೇಣೂರು ತಂಡದವರು ಶವಗಳನ್ನು ಮೇಲಕ್ಕೆತ್ತಿದ್ದಾರೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ನವೆಂಬರ್ 1 ರಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

- Advertisement -

Latest News

error: Content is protected !!