Thursday, June 4, 2026
Homeಅಪರಾಧಗುಲ್ವಾಡಿಯ ಮನೆಯಲ್ಲಿ ಗಾಂಜಾ ಮಾರಾಟ; ದಂಪತಿ ಬಂಧನ

ಗುಲ್ವಾಡಿಯ ಮನೆಯಲ್ಲಿ ಗಾಂಜಾ ಮಾರಾಟ; ದಂಪತಿ ಬಂಧನ

- Advertisement -
- Advertisement -

ಕುಂದಾಪುರ: ದಂಪತಿಗಳಿಬ್ಬರು ಗುಲ್ವಾಡಿಯ ಉದಯನಗರದ ಮನೆಯೊಂದರಲ್ಲಿ ಗಾಂಜಾವನ್ನು ದಾಸ್ತಾನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು, ಆರೋಪಿಗಳಿಬ್ಬರನ್ನು ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಉದಯ ನಗರ ನಿವಾಸಿಗಳಾದ ನಜರುಲ್ಲಾ ಖಾನ್‌ (40) ಹಾಗೂ ಆತನ ಪತ್ನಿ ಫಾತಿಮಾ (33) ಎನ್ನಲಾಗಿದೆ.

ಮನೆಯಲ್ಲಿದ್ದ 6.43 ಲಕ್ಷ ರೂ. ಮೌಲ್ಯದ 5 ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ತುಂಬಿಸಿಟ್ಟಿದ್ದ 8.37 ಕೆ.ಜಿ. ಗಾಂಜಾ, ಟ್ರಾಲಿ ಸೂಟ್‌ಕೇಸ್‌ ಸಹಿತ ಆರೋಪಿಗಳು ಗಾಂಜಾ ಮಾರಾಟ ಮಾಡಲು ಬಳಸುತ್ತಿದ್ದ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇವರಿಗೆ ಹಸೈನಾರ್‌ ಎಂಬಾತ ಗಾಂಜಾ ಪೂರೈಕೆ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!