Monday, June 30, 2025
Homeಕರಾವಳಿಉಡುಪಿಮನೆಯಿಂದ ತೆರಳಿದ ಯುವತಿ ನಾಪತ್ತೆ ಪ್ರಕರಣ; ನಾಪತ್ತೆಯಾದ ಮೂಡುಬೆಳ್ಳೆ ನಿವಾಸಿ ವಿನಿತಾ

ಮನೆಯಿಂದ ತೆರಳಿದ ಯುವತಿ ನಾಪತ್ತೆ ಪ್ರಕರಣ; ನಾಪತ್ತೆಯಾದ ಮೂಡುಬೆಳ್ಳೆ ನಿವಾಸಿ ವಿನಿತಾ

spot_img
- Advertisement -
- Advertisement -

ಉಡುಪಿ: ಮೂಡುಬೆಳ್ಳೆ ಕೊಂಗಿಬೈಲಿನ ಯುವತಿಯೋರ್ವರು ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. 

ಕಾಣೆಯಾದ ಯುವತಿ ಮೂಡುಬೆಳ್ಳೆ ಕೊಂಗಿಬೈಲು ನಿವಾಸಿ ವಿನಿತಾ(22) ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಅ. 9ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಅಕ್ಕನಲ್ಲಿ ಉಡುಪಿಗೆ ಹೋಗುತ್ತೆನೆಂದು ಮನೆಯಿಂದ ತೆರಳಿದ್ದು, ಮತ್ತೆ ಮನೆಗೆ ವಾಪಸ್ಸಲಾಗಲಿಲ್ಲ. ಬಿ.ಕಾಂ. ಪದವೀಧರೆಯಾಗಿರುವ ವಿನಿತಾ, ಉಡುಪಿ ಎಂಜಿಎಂ ಕಾಲೇಜ್ ಬಳಿಯ ಎಲೆಕ್ನಿಕಲ್ ಬೈಕ್ ಶೋರೂಂನಲ್ಲಿ ಸುಮಾರು 4 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು, ವಾರದ ಹಿಂದೆಯಷ್ಟೇ ಕೆಲಸಬಿಟ್ಟಿದ್ದರು.

ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆಕೆಯ ಸ್ನೇಹಿತರಲ್ಲಿ, ಸಂಬಂಧಿಕರ ಮನೆಯಲ್ಲಿ ಆಸುಪಾಸಿನಲ್ಲಿ ಹುಡುಕಾಡಿದ್ದು, ಈ ತನಕ ಪತ್ತೆಯಾಗಿರುವುದಿಲ್ಲ ಎಂದು ಸಹೋದರ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -
spot_img

Latest News

error: Content is protected !!