Thursday, June 4, 2026
Homeಕರಾವಳಿಬಂಟ್ವಾಳ;ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆ

ಬಂಟ್ವಾಳ;ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆ

- Advertisement -
- Advertisement -

ಬಂಟ್ವಾಳ;ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಬಿಸಿರೋಡಿನ ಮಿತ್ತಬೈಲು ನಿವಾಸಿ ಬಾಲಕನ ಮೃತದೇಹ ತಲಪಾಡಿ ಕುಪ್ಪಿಲದ ಕೆರೆಯಲ್ಲಿ ದೊರೆತಿದೆ.ಅಬ್ದುಲ್ ರಝಾಕ್ ಎಂಬವರ ಪುತ್ರ ಖಾಸಗಿ ಶಾಲಾ ಬಾಲಕ ಅಝೀಂ(13) ಮೃತ ಬಾಲಕ.

ಅಝೀಂ ಶನಿವಾರ ಮಧ್ಯಾಹ್ನದ ವೇಳೆ ಸಂಬಂಧಿಕರ ಮನೆಗೆ ಬಂದಿದ್ದ. ಬಾಲಕ ಅಲ್ಲಿ ಸ್ನೇಹಿತರ ಜೊತೆಗೆ ಇದ್ದದ್ದನ್ನು ಸ್ಥಳೀಯರು ಗಮನಿಸಿದ್ದಾರೆ. ಆದರೆ ಬಳಿಕ ಬಾಲಕ ದಿಢೀರ್ ನಾಪತ್ತೆಯಾಗಿದ್ದ.ಇದರಿಂದ ಭಯಗೊಂಡ ಮನೆ ಮಂದಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದರು.

ಬಾಲಕನ‌ ಮೊಬೈಲ್ ಲೊಕೇಶನ್ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಕಳ್ಳಿಗೆಯ ಕುಪ್ಪಿಲ ಕೆರೆ ಬಳಿ ಲೊಕೇಶನ್ ಪತ್ತೆಯಾಗಿತ್ತು. ಸ್ಥಳಕ್ಕೆ ತೆರಳಿದಾಗ ಬಾಲಕನ ಬಟ್ಟೆ ಪತ್ತೆಯಾಗಿತ್ತು. ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.ಬಾಲಕನ ಜೊತೆ ಇನ್ಯಾರಾದರೂ ಈಜಲು ತೆರಳಿದ್ದಾರ ಎಂಬ ಬಗ್ಗೆ ಇದೀಗ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

- Advertisement -

Latest News

error: Content is protected !!